ಜಗತ್ತಿನಲ್ಲಿ ಪ್ರತಿಯೊಬ್ಬರೂ ಏಳು ಡಾಪ್ಪಲ್ಗ್ಯಾಂಗರ್ಗಳನ್ನು ಹೊಂದಿದ್ದಾರೆ ಎಂಬ ನಂಬಿಕೆ ಬಹುಕಾಲದಿಂದ ಇದೆ. ಸೆಲೆಬ್ರಿಟಿಗಳ ವಿಚಾರಕ್ಕೆ ಬಂದಾಗಲಂತೂ ಈ ವಿಷಯ ಆಸಕ್ತಿದಾಯಕ.
ಸದ್ಯಕ್ಕೆ ರಿಜುತಾ ಘೋಷ್ ದೇಬ್ ಎಂಬ ಡಿಜಿಟಲ್ ಕ್ರಿಯೇಟರ್ ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಅವರ ಹೊಸ ಡೊಪ್ಪಲ್ಗ್ಯಾಂಗರ್ ಎಂದು ನೆಟ್ಟಿಗರು ವ್ಯಾಖ್ಯಾನಿಸಿದ್ದಾರೆ.
ರಿಜುತಾ ಬಂಗಾಳಿ ಡಿಜಿಟಲ್ ಕ್ರಿಯೇಟರ್ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ. ಅವರು ಹೆಚ್ಚಾಗಿ ಸೌಂದರ್ಯ, ಫ್ಯಾಷನ್ ಮತ್ತು ಜೀವನಶೈಲಿಯ ಬಗ್ಗೆ ಪೋಸ್ಟ್ ಮಾಡುತ್ತಾರೆ. ಅವರ ಚಿತ್ರಗಳನ್ನು ನೋಡಿದರೆ, ಕೆಲವು ಕೋನಗಳಿಂದ ದೀಪಿಕಾಳಂತೆ ಕಾಣುತ್ತಿರುವುದನ್ನು ಗಮನಿಸಬಹುದು.
‘ಪಿಕು’ ತಾರೆಯೊಂದಿಗೆ ರಿಜುತಾ ಅವರ ಹೋಲಿಕೆಯ ಚಿತ್ರಗಳು ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ಎಲ್ಲರೂ ಗೊಂದಲಕ್ಕೊಳಗಾಗಿದ್ದಾರೆ. ಅವಳ ಮೂಗಿನಿಂದ ಕಣ್ಣುಗಳವರೆಗೆ, ಕೇಶವಿನ್ಯಾಸದವರೆಗೆ, ರಿಜುತಾ ದೀಪಿಕಾಳೊಂದಿಗೆ ಸಂರ್ಪೂಣ ಹೋಲಿಕೆಯನ್ನು ಹಂಚಿಕೊಳ್ಳುತ್ತಾಳೆ, ವಿಶೇಷವಾಗಿ ಇತ್ತೀಚಿನ ಚಲನಚಿತ್ರ ‘ಗೆಹರಾಯಿನ್’ನ ಚಿತ್ರದಂತೆಯೇ ಆಕೆ ಕಾಣಿಸಿಕೊಳ್ಳುತ್ತಾರೆ.
ನೆಟ್ಟಿಗರು ದೀಪಿಕಾ ಪತಿ ರಣವೀರ್ ಸಿಂಗ್ ಅವರನ್ನು ಹಲವರು ಕಾಮೆಂಟ್ಗಳಲ್ಲಿ ಟ್ಯಾಗ್ ಮಾಡಿದ್ದಾರೆ, ಗಮನಿಸಿ ಎಂದು ಕೇಳಿದ್ದಾರೆ.
ರಿಜುತಾ ಅವರ ಚಿತ್ರಕ್ಕೆ ಪ್ರತಿಕ್ರಿಯಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರು, ಓ ಮೈ ಗಾಡ್! ನೀವು ದೀಪಿಕಾ ಪಡುಕೋಣೆಯವರು ಡಿಟ್ಟೋ ಕಾಪಿ. ರಣವೀರ್ ಕೂಡ ಗೊಂದಲಕ್ಕೊಳಗಾಗುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ. “ರಣವೀರ್ ಭಾಯ್ ಭಿ ಶಾಕ್ ಹೋ ಜಾಂಗೆ” ಎಂದು ಮತ್ತೊಬ್ಬರು ಬರೆದಿದ್ದಾರೆ.