ತಮ್ಮ ಚಿತ್ರಗಳ ಬಿಡುಗಡೆಗೂ ಮುನ್ನ ಮುಂಬಯಿಯ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡುವುದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯ ಅಭ್ಯಾಸ.
ತಮ್ಮ ಪತಿ ಹಾಗೂ ಖುದ್ದು ತಾವು ನಟಿಸಿರುವ ’83’ ಚಿತ್ರದ ಬಿಡುಗಡೆ ಶುಕ್ರವಾರ ಆಗಿದ್ದು, ಈ ಹಿನ್ನೆಲೆಯಲ್ಲಿ, ಅದರ ಹಿಂದಿನ ದಿನ ದೀಪಿಕಾ ದೇವಸ್ಥಾನದ ಹೊರಗೆ ಕಾಣಿಸಿಕೊಂಡಿದ್ದಾರೆ.
ಗಣೇಶ ದೇವರ ಹಾರೈಕೆಗಳನ್ನು ಕೋರಿ ದೇವಸ್ಥಾನಕ್ಕೆ ಆಗಮಿಸಿದ್ದ ದೀಪಿಕಾ, ಕೆಂಪು ಬಣ್ಣದ ಸಲ್ವಾರ್ ಕಮೀಜ಼್‌ನಲ್ಲಿ ಮಿಂಚುತ್ತಿದ್ದು, ಅವರನ್ನು ಅಂಗರಕ್ಷಕರೊಬ್ಬರು ದೇವಸ್ಥಾನಕ್ಕೆ ಕರೆದುಕೊಂಡು ಬರುತ್ತಿರುವ ವಿಡಿಯೋವನ್ನೂ ಮಾಧ್ಯಮವೊಂದು ಪೋಸ್ಟ್ ಮಾಡಿದ್ದು, ಈ ವಿಡಿಯೋ ಸಹ ವೈರಲ್ ಆಗಿದೆ.