2021ರ ಆರಂಭವನ್ನು ತಮ್ಮ ಇನ್‍ಸ್ಟಾಗ್ರಾಂ ಖಾತೆಯ ನವೀಕರಣದೊಂದಿಗೆ ಆರಂಭಿಸಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಇತ್ತೀಚೆಗೆ ಪ್ರತಿಷ್ಠಿತ ನಿಯತಕಾಲಿಕೆ ವೋಗ್ ಇಂಡಿಯಾದ ಮುಖಪುಟದಲ್ಲಿ ಕಾಣಿಸಿಕೊಂಡು, ಮಿಂಚಿನ ನಗೆ ಬೀರಿದ್ದಾರೆ. ತಿಳಿಯಾದ ಆಕಾಶ ನೀಲಿಯ ಬಣ್ಣದ ಪ್ಯಾಂಟ್-ಸೂಟ್ ಧರಿಸಿರುವ ದೀಪಿಕಾ, ಹಿಂಬದಿ ತಿರುಗಿ ನಗುತ್ತಾ ಪೋಸ್ ಕೊಟ್ಟಿದ್ದಾರೆ. ವಜ್ರಗಳ ಸಂಗ್ರಹದ ಕಂಪನಿಯೊಂದರ ಪ್ರಚಾರಕ್ಕಾಗಿ ಅವರು ಈ ಫೋಟೊಶೂಟ್ ನಡೆಸಿದ್ದಾರೆ.
ನಾನು ನನ್ನ ಸ್ಟೈಲ್ ಗುರುವಾಗಿ ತಾಯಿಯನ್ನೇ ಸದಾಕಾಲ ನೋಡುತ್ತೇನೆ. ಅದು ನನಗೆ ಬಹಳ ಹತ್ತಿರವಾದದ್ದು ಎಂದು ಇನ್‍ಸ್ಟಾಗ್ರಾಂನಲ್ಲಿ ಫೋಟೊ ಹಂಚಿಕೊಂಡು, ಅಡಿಬರಹ ಹಾಕಿದ್ದಾರೆ.
SHOCKING: ಪಾರ್ಟಿಯಲ್ಲಿ ಹೀಗಾಯ್ತು… ಸ್ನೇಹಿತನಿಂದಲೇ ಆಘಾತಕಾರಿ ಕೃತ್ಯ
ಇದಕ್ಕೆ ಕಮೆಂಟ್ ಮಾಡಿರುವ ದೀಪಿಕಾ ಅವರ ಪತಿ ಹಾಗೂ ಬಾಲಿವುಡ್‍ನ ಹಾಟ್ ಫೇವರೇಟ್ ನಟ ರಣವೀರ್ ಸಿಂಗ್, ಎದೆ ಒಡೆದ ನಿನ್ನ ನಗುವಿದು ಎಂಬಂತೆ ‘ಆಯ್ ಹಾಯೇ’ ಎಂದು ಬರೆದಿದ್ದಾರೆ.
ಶೀಘ್ರದಲ್ಲೇ ಪತಿ ರಣವೀರ್ ನಾಯಕರಾಗಿರುವ ಕ್ರಿಕೆಟ್ ವಿಶ್ವಕಪ್ ಆಧಾರಿತ ಸಿನಿಮಾ ’83’ಯಲ್ಲಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ.
https://www.instagram.com/p/CSwKn79Mj0H/?utm_source=ig_web_copy_link