alex Certify 2022ರ ಐಪಿಎಲ್​ ಪಂದ್ಯಾವಳಿಗೆ ಎಂಟ್ರಿ ಕೊಡ್ತಾರಾ ದೀಪಿಕಾ – ರಣವೀರ್​ ದಂಪತಿ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2022ರ ಐಪಿಎಲ್​ ಪಂದ್ಯಾವಳಿಗೆ ಎಂಟ್ರಿ ಕೊಡ್ತಾರಾ ದೀಪಿಕಾ – ರಣವೀರ್​ ದಂಪತಿ..?

2022ನೇ ಸಾಲಿನ ಐಪಿಎಲ್​ ಆವೃತ್ತಿಯಲ್ಲಿ 10 ಪಂದ್ಯಗಳು ಟ್ರೋಫಿ ಗೆಲ್ಲಲು ಸೆಣೆಸಲಿವೆ. ಮುಂದಿನ ಸೀಸನ್​ಗೆ ಸೇರ್ಪಡೆಯಾಗಲಿರುವ 2 ಹೊಸ ತಂಡಗಳ ಮಾಲೀಕತ್ವವವನ್ನು ಪಡೆಯಲು ಐಪಿಎಲ್​ ಆಡಳಿತ ಮಂಡಳಿ ಬಿಡ್​ ಕರೆದಿದೆ. ಉನ್ನತ ಮೂಲಗಳಿಂದ ಸಿಕ್ಕಿರುವ ಮಾಹಿತಿಯ ಪ್ರಕಾರ ದೀಪಿಕಾ ಪಡುಕೋಣೆ ಹಾಗೂ ರಣವೀರ್​ ಸಿಂಗ್​​ ಹೊಸ ಫ್ರಾಂಚೈಸಿ ಮಾಲೀಕತ್ವವನ್ನು ಪಡೆಯಲು ಬಿಡ್​ ಸಲ್ಲಿಸಲಿದ್ದಾರೆ ಎನ್ನಲಾಗಿದೆ.

2022 ರ ಐಪಿಎಲ್​ ಪಂದ್ಯಾವಳಿಯ ಹೊಸ ತಂಡದ ಮಾಲೀಕತ್ವವನ್ನು ಪಡೆಯುವ ರೇಸ್​ನಲ್ಲಿ ಈಗಾಗಲೇ ಅದಾನಿ ಗ್ರೂಪ್​ ಹಾಗೂ ಆರ್​ಪಿ ಸಂಜೀವ್​ ಗೋಯೆಂಕಾ ಗ್ರೂಪ್​​​ಗಳ ಹೆಸರುಗಳು ಕೇಳಿ ಬಂದಿದೆ. ಇದೀಗ ಸಿಕ್ಕಿರುವ ಹೊಸ ಮಾಹಿತಿಯ ಪ್ರಕಾರ ಸ್ಟಾರ್​ ದಂಪತಿಯಾದ ದೀಪಿಕಾ ಹಾಗೂ ರಣವೀರ್​ ಕೂಡ ಹೊಸ ತಂಡಕ್ಕೆ ಬಿಡ್​ ಮಾಡಲಿದ್ದಾರೆ ಎನ್ನಲಾಗಿದೆ.

ಐಪಿಎಲ್​ ಪಂದ್ಯಗಳನ್ನಾಡುವ ಕ್ರಿಕೆಟ್​ ತಂಡಗಳ ಮಾಲೀಕತ್ವವನ್ನು ಬಾಲಿವುಡ್​ ಮಂದಿ ಹೊಂದುವುದು ಇದೇ ಮೊದಲೇನಲ್ಲ. ಕೊಲ್ಕತ್ತಾ ನೈಡ್​​ ರೈಡರ್ಸ್​ ತಂಡಕ್ಕೆ ಶಾರೂಕ್​ ಖಾನ್​ ಹಾಗೂ ಜೂಹಿ ಚಾವ್ಲಾ ಮಾಲೀಕರಿದ್ದಾರೆ. ಅದರಂತೆ ಪ್ರೀತಿ ಜಿಂಟಾ ಪಂಜಾಬ್​ ಕಿಂಗ್ಸ್​ ತಂಡದ ಮಾಲೀಕತ್ವ ವಹಿಸಿದ್ದಾರೆ. ಇದೀಗ ಕ್ರೀಡಾ ಕುಟುಂಬದಿಂದಲೇ ಬಂದಿರುವ ದೀಪಿಕಾ ಕೂಡ ಮುಂದಿನ ವರ್ಷದ ಐಪಿಎಲ್​ಗೆ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...