![](https://kannadadunia.com/wp-content/uploads/2023/07/Ranveer-Singh-surprises-Deepika-Padukone-1280-1024x640.jpg)
ರಣ್ವೀರ್ ಸಿಂಗ್ ಜುಲೈ 6 ರಂದು ತಮ್ಮ 38 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅವರ ಸಹೋದ್ಯೋಗಿಗಳು ಮತ್ತು ಆಪ್ತರು ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಪ್ರೀತಿ ಮತ್ತು ಮೆಚ್ಚುಗೆಯನ್ನು ಸೂಚಿಸಿ ಶುಭಾಶಯದ ಪೋಸ್ಟ್ ಹಾಕಿದ್ದಾರೆ.
ಆದರೆ ಅವರ ಪತ್ನಿ, ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ರಣವೀರ್ ಸಿಂಗ್ ಅವರ ಜನ್ಮದಿನದಂದು ಯಾವುದೇ ಪೋಸ್ಟ್ ಅನ್ನು ಹಂಚಿಕೊಂಡಿಲ್ಲ. ಇದರಿಂದಾಗಿ ದೀಪ್ ವೀರ್ ಅಭಿಮಾನಿಗಳು ನಿರಾಶೆ ಹೊಂದಿದ್ದಾರೆ.
ಅಭಿಮಾನಿಗಳ ಗುಂಪೊಂದು ಇನ್‌ಸ್ಟಾಗ್ರಾಮ್‌ನಲ್ಲಿ ದೀಪಿಕಾಪಡುಕೋಣೆ ಖಾತೆಯ ಕಾಮೆಂಟ್ ವಿಭಾಗದಲ್ಲಿ “ನಾನು ಇಡೀ ದಿನ ದೀಪಿಕಾ ಅವರ ಇನ್‌ಸ್ಟಾಗ್ರಾಮ್‌ನಲ್ಲಿ ರಣವೀರ್ ಅವರ ಹುಟ್ಟುಹಬ್ಬದ ಶುಭಾಶಯ ಪೋಸ್ಟ್ ಗಾಗಿ ಕಾಯುತ್ತಿದ್ದೇನೆ” ಎಂದು ಬರೆದಿದ್ದಾರೆ. ಮತ್ತೊಬ್ಬರು, “ನಿಮ್ಮ ಗಂಡನ ಹುಟ್ಟುಹಬ್ಬದಂದು ಏನಾದರೂ ಪೋಸ್ಟ್ ಮಾಡಿ” ಎಂದು ಹೇಳಿದ್ದಾರೆ. “ನೀವು ನಿಮ್ಮ ಪತಿಗೆ ಹುಟ್ಟುಹಬ್ಬದ ಪೋಸ್ಟ್ ಹಾಕಿಲ್ಲವೇ?” ಎಂದು ಮತ್ತೊಬ್ಬರು ಕೇಳಿದ್ದಾರೆ.
ಏತನ್ಮಧ್ಯೆ ಕರಣ್ ಜೋಹರ್, ರಣ್ ವೀರ್ ಸಿಂಗ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ರಣ್ ವೀರ್ ಸಿಂಗ್ ನ ಮುಂಬರುವ ಚಿತ್ರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯನ್ನು ನಿರ್ದೇಶಿಸುತ್ತಿರುವ ಕರಣ್ ಇನ್ ಸ್ಟಾಗ್ರಾಂನಲ್ಲಿ ಹುಟ್ಟುಹಬ್ಬ ಶುಭಾಶಯದ ಟಿಪ್ಪಣಿಯೊಂದಿಗೆ , “ಇದು ರಾಕಿ ದಿನ!!!! ಪ್ರಕೃತಿಯ ಈ ಮಹಾನ್ ಶಕ್ತಿಗೆ ಜನ್ಮದಿನದ ಶುಭಾಶಯಗಳು. ನಮ್ಮ ಕಥೆಗೆ ನಿಮ್ಮ ಹೃದಯವನ್ನು ನೀಡಿದ್ದಕ್ಕಾಗಿ ಧನ್ಯವಾದಗಳು..… ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ. ನಿಮಗೆ ಯಾವಾಗಲೂ ಬಹಳಷ್ಟು ಪ್ರೀತಿ” ಎಂದು ಪೋಸ್ಟ್ ಗೆ ಶೀರ್ಷಿಕೆ ನೀಡಿದ್ದಾರೆ.
![](https://images.news18.com/ibnlive/uploads/2023/07/whatsapp-image-2023-07-07-at-6.49.38-am.jpeg?impolicy=website&width=0&height=0)
![](https://images.news18.com/ibnlive/uploads/2023/07/whatsapp-image-2023-07-07-at-6.49.26-am.jpeg?impolicy=website&width=0&height=0)