ಖ್ಯಾತ ನಟಿ ದೀಪಿಕಾ ಪಡುಕೋಣೆ ಏನೇ ಮಾಡಿದರೂ ಸುದ್ದಿಯಾಗುತ್ತಾರೆ. ತಮ್ಮ ಜೀವನದ ಪ್ರಮುಖ ಘಟನೆಗಳನ್ನು, ಸಂಭ್ರಮಗಳನ್ನು ಹಂಚಿಕೊಳ್ಳುವ ಮೂಲಕ ಅವರು ಸೋಷಿಯಲ್ ಮೀಡಿಯಾದಲ್ಲಿ ಸದಾಕಾಲ ಸಕ್ರಿಯರಾಗಿರುತ್ತಾರೆ. ಇದೀಗ ಅವರು ತಮ್ಮ ಇನ್ ಸ್ಟಾಗ್ರಾಂ ಖಾತೆಯ ಡಿಪಿಯನ್ನ ಬದಲಾಯಿಸಿದ್ದು ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.
ಆಕಾಶದ ಚಿತ್ರವನ್ನ ತಮ್ಮ ಡಿಪಿಗೆ ಹಾಕಿ ಅಭಿಮಾನಿಗಳಿಗೆ ಕನ್ಫೂಸ್ ಮಾಡಿದ್ದಾರೆ. ಇದರೊಂದಿಗೆ
ದೀಪಿಕಾ ಇನ್‌ಸ್ಟಾಗ್ರಾಂ ಟೈಮ್‌ಲೈನ್‌ನಲ್ಲಿ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತಾವೇ ತೆಗೆದ ಫೋಟೋಗಳನ್ನು ಪೋಸ್ಟ್ ಮಾಡಿರುವ ದೀಪಿಕಾ, “ಯಾರಾದರೂ ಮೋಡದ ರಚನೆಗಳ ಚಿತ್ರಗಳನ್ನು ತೆಗೆದುಕೊಳ್ಳುವ ಗೀಳು ಹೊಂದಿದ್ದೀರಾ? #ನೋಫಿಲ್ಟರ್ ಎಂದು ಬರೆದಿದ್ದಾರೆ.
ಡಿಪಿ ಬದಲಿಸಿರುವುದನ್ನ ಹಲವಾರು ಅಭಿಮಾನಿಗಳು ಪ್ರಶ್ನಿಸಿದ್ದು, “ಓ ದೇವರೇ, ಈ ನಡವಳಿಕೆ ಏನು, ನಿಮ್ಮ ಪ್ರೊಫೈಲ್‌ನಲ್ಲಿ ಮೋಡಗಳ ಚಿತ್ರಗಳನ್ನು ಏಕೆ ಹಾಕಿದ್ದೀರಿ” ಎಂದು ಬರೆದಿದ್ದಾರೆ. “ನೀವು ಮಾಡುವ ಎಲ್ಲವನ್ನೂ ನಾನು ಬೆಂಬಲಿಸುವುದಿಲ್ಲ” ಎಂದು ಮತ್ತಷ್ಟು ಅಭಿಮಾನಿಗಳು ದೂರುತ್ತಾ ನಿರಾಸೆ ತೋರಿಸಿದ್ದಾರೆ.