ನಟಿ ದೀಪಿಕಾ ಪಡುಕೋಣೆ ಸದ್ಯ ʼಪಠಾಣ್ʼ ಯಶಸ್ಸಿನಿಂದ ಭರ್ಜರಿ ಖುಷಿಯಲ್ಲಿದ್ದಾರೆ. ಹಲವಾರು ಸೂಪರ್ ಹಿಟ್ ಚಿತ್ರ ನೀಡಿರುವ ದೀಪಿಕಾ ಓದಿನಲ್ಲಿ ಹಿಂದೆ ಉಳಿದಿದ್ದರು ಎನ್ನುವುದು ಗೊತ್ತೆ ? ಅದೀಗ ರಿವೀಲ್ ಆಗಿದೆ.
ನಟಿ ದೀಪಿಕಾ ಪಡುಕೋಣೆ ಅವರು 12 ನೇ ತರಗತಿಯವರೆಗೆ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ದೀಪಿಕಾ ಅವರ ಅಪ್ಪ-ಅಮ್ಮ ಮಗಳು ಡಿಗ್ರಿ ಮಾಡಬೇಕೆಂದು ಆಸೆಪಟ್ಟಿದ್ದರು. ಆದರೆ ದೀಪಿಕಾ ಓದಿದ್ದು ಪಿಯುಸಿ ಸೆಕೆಂಡ್ ಇಯರ್ವರೆಗೆ ಮಾತ್ರ.
ದೀಪಿಕಾ ಪಡುಕೋಣೆ ಬೆಂಗಳೂರಿನಲ್ಲಿ ಶಿಕ್ಷಣ ಪೂರೈಸಿದ್ದಾರೆ. ಅವರು ಓದಿದ್ದು ಬೆಂಗಳೂರಿನ ಸೋಫಿಯಾ ಹೈಸ್ಕೂಲಿನಲ್ಲಿ. ನಂತರ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಓದಿದರು.
ಸಮಾಜಶಾಸ್ತ್ರದಲ್ಲಿ ಬಿಎ ಮಾಡಲು ಪ್ರಾರಂಭ ಮಾಡಿದ್ದರು. ಅದಕ್ಕಾಗಿ ದೆಹಲಿಯ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಸೇರಿಕೊಂಡಿದ್ದರು. ಆದರೆ ಅವರು ಮಧ್ಯದಲ್ಲೇ ಕಾಲೇಜು ಬಿಟ್ಟರು. ಪದವಿ ಪೂರ್ಣಗೊಳಿಸಲಿಲ್ಲ.
ದೀಪಿಕಾ ಪಡುಕೋಣೆ, ಕ್ರೀಡಾ ಕುಟುಂಬದಿಂದ ಬಂದವರು. ತಂದೆ ಪ್ರಕಾಶ್ ಪಡುಕೋಣೆ ಎಲ್ಲರಿಗೂ ಚಿರಪರಿಚಿತ. ಖುದ್ದು ದೀಪಿಕಾ ಕೂಡ ಶ್ರೇಷ್ಠ ಬ್ಯಾಡ್ಮಿಂಟನ್ ಆಟಗಾರ್ತಿ. ಆದರೆ ಬಾಲಿವುಡ್ ಕನಸು ಆಕೆಯನ್ನು ಕ್ರೀಡಾ ಲೋಕದಿಂದ ದೂರವಿಟ್ಟಿದ್ದು, ಇದೀಗ ಮನರಂಜನಾ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ.