ಕರ್ನಾಟಕ ಮೂಲದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸದ್ಯದ ಮಟ್ಟಿಗೆ ಬಹುಬೇಡಿಕೆಯ ಸ್ಟಾರ್ ನಟಿ. ನಟ ರಣವೀರ್ ಸಿಂಗ್ ಜತೆಗೆ ವಿವಾಹವಾಗುವ ಮುನ್ನ ನಟಿಯನ್ನು ಕೆಲ ನಟರು, ಉದ್ಯಮಿಗಳ ಜತೆಗೆ ಸ್ನೇಹ ಹೊಂದಿರುವ ವದಂತಿಗಳ ಜತೆಗೆ ತಳಕು ಹಾಕಲಾಗುತ್ತಿತ್ತು. ಅಂಥದ್ದೇ ಬಾಯ್‌ಫ್ರೆಂಡ್-ಗರ್ಲ್‌ಫ್ರೆಂಡ್ ವರದಿಯಲ್ಲಿ ದೀಪಿಕಾ ಜತೆಗೆ ಸುದ್ದಿ ಆಗಿದ್ದು ಉದ್ಯಮಿ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ್ ಮಲ್ಯ.
ಮಕ್ಕಳೊಂದಿಗೆ ಜಾನಿ ಲಿವರ್ ಸಖತ್ ಡಾನ್ಸ್…! ಜಗಳ ಬಿಡಿಸಿದೆ ಎಂದ ಕಾಮಿಡಿ ಕಿಂಗ್
ಇಬ್ಬರೂ ಬಹಳ ಆತ್ಮೀಯವಾಗಿ ಕಾಲಕಳೆದ ಕ್ಷಣಗಳ ಫೋಟೊಗಳು ವೈರಲ್ ಆಗಿದ್ದವು. ವಿಜಯ್ ಮಲ್ಯ ಖರೀದಿಸಿದ್ದ ಐಪಿಎಲ್ ಕ್ರಿಕೆಟ್ ಟೀಮ್ ’ರಾಯಲ್ ಚಾಲೆಂಜರ್ಸ್ ಬೆಂಗಳೂರು-ಆರ್‌ಸಿಬಿ’ಗೆ ದೀಪಿಕಾ ಕೆಲ ಕಾಲ ರಾಯಭಾರಿ ಆಗಿದ್ದರು. ಆ ಸಂದರ್ಭ ಅವರ ಮತ್ತು ಸಿದ್ಧಾರ್ಥ್ ಒಡನಾಟ ಆತ್ಮೀಯವಾಗಿತ್ತು ಎನ್ನಲಾಗಿದೆ.
ಬಿಜೆಪಿಗೆ ಬಿಸಿತುಪ್ಪವಾಗಿದ್ದ ಸುಬ್ರಮಣಿಯನ್ ಸ್ವಾಮಿ, ವರುಣ್ ಗಾಂಧಿಗೆ ಬಿಗ್ ಶಾಕ್: ಕಾರ್ಯಕಾರಿಣಿಯಿಂದ ಗೇಟ್ ಪಾಸ್
ಈಗ ಮತ್ತೆ ಸಿದ್ಧಾರ್ಥ್ ಅವರು ಮಾಜಿ ಗೆಳತಿಯನ್ನು ಸ್ಮರಿಸಿಕೊಂಡಿದ್ದಾರೆ. ’ಇಫ್ ಐ ಯಾಮ್ ಹಾನೆಸ್ಟ್’ ಎಂಬ ಜೀವನ ಘಟನಾವಳಿಗಳ ಆಧರಿತ ಪುಸ್ತಕವನ್ನು ಸಿದ್ಧಾರ್ಥ್ ಬರೆದಿದ್ದಾರೆ. ಅದರಲ್ಲಿ ಮಾನಸಿಕ ಒತ್ತಡ, ಖಿನ್ನತೆ ಹಾಗೂ ಇತರ ಮಾನಸಿಕ ಸ್ವಾಸ್ಥ್ಯದ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಬರೆದುಕೊಂಡಿದ್ದಾರೆ.
ಈ ವೇಳೆ ದೀಪಿಕಾ ಅವರು ಕೂಡ ಖಿನ್ನತೆ ಮತ್ತು ಒತ್ತಡದಿಂದ ಬಳಲುವವರ ಸಹಾಯಕ್ಕಾಗಿ ಸ್ಥಾಪಿಸಿರುವ ’ಲೀವ್ ಲಾಫ್ ಲವ್’ ಪ್ರತಿಷ್ಠಾನದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಮಾನಸಿಕ ಆರೋಗ್ಯದ ರಕ್ಷಣೆ ಬಗ್ಗೆ ಮಾತನಾಡುವವರು ಬಹಳಷ್ಟು ಮಂದಿ ಸಿಗುತ್ತಾರೆ. ಆದರೆ, ದೀಪಿಕಾ ಅವರ ಸಹಚರರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಹಾಡಿಹೊಗಳಿದ್ದಾರೆ.