ನವದೆಹಲಿ: ಐಶ್ವರ್ಯಾ ರೈ ಬಚ್ಚನ್, ರಶ್ಮಿಕಾ ಮಂದಣ್ಣ, ಸಾರಾ ತೆಂಡೂಲ್ಕರ್, ಸಚಿನ್ ತೆಂಡೂಲ್ಕರ್ ಮತ್ತು ಅಮಿತಾಬ್ ಬಚ್ಚನ್ ನಂತರ ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಬದಲಾವಣೆಯ ವೀಡಿಯೊ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದೆ.
ವರದಿಗಳ ಪ್ರಕಾರ, ವೈರಲ್ ಆಗಿರುವ ವೀಡಿಯೊದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಸಭೆಯಲ್ಲಿ ಪ್ರೀತಿಯ ಬಗ್ಗೆ ಮಾತನಾಡುತ್ತಿರುವುದನ್ನು ತೋರಿಸುತ್ತದೆ.
ಕೃತಕ ಬುದ್ಧಿಮತ್ತೆ (ಎಐ) ಸಹಾಯದಿಂದ ಸುಳ್ಳು ಸಂದೇಶವನ್ನು ರೆಕಾರ್ಡ್ ಮಾಡಲು ದುಷ್ಕರ್ಮಿಗಳು ಪ್ರಧಾನಿ ನರೇಂದ್ರ ಮೋದಿಯವರ ಧ್ವನಿ ಮಾದರಿಗಳನ್ನು ಬಳಸಿಕೊಂಡು ಹಳೆಯ ವೀಡಿಯೊದ ಮೇಲೆ ಅಂಟಿಸಿದ್ದಾರೆ ಎಂದು ತಜ್ಞರು ಹೇಳಿದ್ದಾರೆ.
ನಂತರ, ವೀಡಿಯೊದಲ್ಲಿ ಫ್ಯಾಕ್ಟ್ ಚೆಕ್ ನಡೆಸಿದಾಗ, ಪ್ರೀತಿಯ ಬಗ್ಗೆ ಭಾಷಣವನ್ನು ಬಾಗೇಶ್ವರ ಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.