ಮೈಸೂರು: ನಾಡಿನೆಲ್ಲೆಡೆ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ಮೈಸೂರು ವಿಭಾಗ ವಿಶೇಷ ರೈಲುಗಳನ್ನು ಬಿಡುತ್ತಿದೆ.
ಮೈಸೂರು ಹಾಗೂ ಮಂಗಳೂರು ನಡುವೆ ಈ ರೈಲುಗಳು ಸಂಚರಿಸಲಿವೆ. ರೈಲು ಸಂಖ್ಯೆ 07303 ಮೈಸೂರು-ಮಂಗಳೂರು ಶುಕ್ರವಾರ ರಾತ್ರಿ 8:30ಕ್ಕೆ ಮೈಸೂರಿನಿಂದ ಹೊರಟು ಶನಿವಾರ ಬೆಳಿಗ್ಗೆ 9:40ಕ್ಕೆ ಮಂಗಳೂರು ತಲುಪಲಿದೆ.
ಮೈಸೂರಿನಿಂದ ಮಂಡ್ಯ, ಕೆಂಗೇರಿ, ಕೆ ಎಸ್ ಆರ್ ಬೆಂಗಳುರು, ಯಶವಂತಪುರ, ಚಿಕ್ಕಬಾಣಾವರ, ನೆಲಮಂಗಲ, ಕುಣಿಗಲ್, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು, ಬಂಟ್ವಾಳ ಮಾರ್ಗದ ಮೂಲಕ ಮಂಗಳೂರು ಜಂಕ್ಷನ್ ತಲುಪಲಿದೆ.
ರೈಲು ಸಂಖ್ಯೆ 07304 ಮಂಗಳೂರು-ಮೈಸೂರು ಟ್ರೇನ್ ಶನಿವಾರ ಬೆಳಿಗ್ಗೆ 11:40ಕ್ಕೆ ಮಂಗಳೂರಿನಿಂದ ಹೊರಟು ಭಾನುವಾರ ಬೆಳಿಗ್ಗೆ 12:50ಕ್ಕೆ ಮೈಸೂರು ತಲುಪಲಿದೆ.
ಈ ರೈಲು ಬಂಟ್ವಾಳ, ಕಬಕಪುತ್ತೂರು, ಸುಬ್ರಹ್ಮಣ್ಯ ರಸ್ತೆ, ಸಕಲೇಶಪುರ, ಹಾಸನ, ಚನ್ನರಾಯಪಟ್ಟಣ, ಶ್ರವಣಬೆಳಗೊಳ, ಕುಣಿಗಲ್, ನೆಲಮಂಗಲ, ಚಿಕ್ಕಬಾಣಾವರ, ಯಶವಂತಪುರ, ಕೆ.ಎಸ್ ಆರ್ ಬೆಂಗಳೂರು, ಕೆಂಗೇರಿ ಮೂಲಕ ಮಂಡ್ಯ ತಲುಪಲಿದೆ.