ದೀಪಾವಳಿ ಬಂತೆಂದರೆ ಎಲ್ಲೆಡೆ ಸಡಗರ. ಹಬ್ಬಕ್ಕೆ ಸ್ವಲ್ಪ ದಿನ ಮುಂಚೆ ಮನೆಯನ್ನು ಸ್ವಚ್ಛಗೊಳಿಸುವ ಬರಾಟೆಯೂ ಜೋರಾಗಿಯೇ ನಡೆಯುತ್ತದೆ. ಮನೆಯನ್ನು ಸ್ವಚ್ಛಗೊಳಿಸುವಾಗ ಕೆಲವು ಒಡೆದ, ಹಾಳಾದ ವಸ್ತುಗಳನ್ನು ಹೊರಗೆ ಹಾಕಬೇಕು. ವಾಸ್ತು ಪ್ರಕಾರ, ಅವುಗಳು ಮನೆಯಲ್ಲಿದ್ದರೆ ಇದ್ದಲ್ಲಿ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ.
ಮನೆಯಲ್ಲಿ ಒಡೆದ ಕನ್ನಡಿ ಇಡುವುದು ಒಳ್ಳೆಯದಲ್ಲ. ಕುಟುಂಬದ ಸದಸ್ಯರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ.
ಮನೆಯಲ್ಲಿ ಮುರಿದ ಮಂಚವಿದ್ದರೆ ಅದನ್ನು ಕೂಡ ಮನೆಯಿಂದ ಹೊರಗೆ ಹಾಕಬೇಕು. ಮುರಿದ ಮಂಚ, ವೈವಾಹಿಕ ಜೀವನದಲ್ಲಿ ಅಶಾಂತಿ, ಚಿಂತೆ ಹೆಚ್ಚಿಸುತ್ತದೆ.
ಮನೆಯಲ್ಲಿ ಹಾಳಾದ ಅಥವಾ ಒಡೆದ, ಓಡದ ಗಡಿಯಾರವನ್ನೂ ಇಡಬಾರದು. ಒಡೆದ ಗಡಿಯಾರ ಉನ್ನತಿಗೆ ತೊಡಕು ಮಾಡಬಹುದು.
ಮನೆಯಲ್ಲಿ ದೇವರ ಅಥವಾ ಮನೆಯ ಸದಸ್ಯರ ಒಡೆದ ಫೋಟೋ ಇದ್ದಲ್ಲಿ ಅದನ್ನು ಹೊರಗೆ ಹಾಕಿ. ಒಡೆದ ಫೋಟೋದಿಂದ ವಾಸ್ತು ದೋಷ ಉಂಟಾಗುತ್ತದೆ.
ಮನೆಯ ಮುಖ್ಯ ಬಾಗಿಲು ಹಾಳಾದಲ್ಲಿ ಮೊದಲು ಅದನ್ನು ಸರಿಪಡಿಸಬೇಕು. ಒಡೆದ ಬಾಗಿಲು ಅಶುಭದ ಸಂಕೇತ. ಖುರ್ಚಿ, ಟೇಬಲ್ ಸೇರಿದಂತೆ ಯಾವುದೇ ಪಿಠೋಪಕರಣ ಹಾಳಾಗಿದ್ದರೂ ಅದನ್ನು ಸರಿಪಡಿಸಬೇಕು.