ಜೀ ಕನ್ನಡದಲ್ಲಿ ಪ್ರಸಾರವಾಗುವ ‘ಲಕ್ಷ್ಮಿ ನಿವಾಸ’ ಧಾರವಾಹಿಯಲ್ಲಿ ಜಯಂತ್ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿರುವ ದೀಪಕ್ ಸುಬ್ರಹ್ಮಣ್ಯ ಇದೀಗ ‘ಮಿಸ್ಟರ್ ರಾಣಿ’ ಚಿತ್ರದಲ್ಲಿ ಬಿಜಿಯಾಗಿದ್ದು, ಇನ್ನೇನು ತೆರೆ ಮೇಲೆ ಬರಲು ಸಿದ್ಧವಾಗಿದೆ. ಇದರ ಟ್ರೈಲರ್, ನಿನ್ನೆಯಷ್ಟೇ youtube ನಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ನೋಡುಗರ ಗಮನ ಸೆಳೆದಿದೆ.
ಮಧುಚಂದ್ರ ಆರ್ ನಿರ್ದೇಶಿಸಿರುವ ಈ ಚಿತ್ರವನ್ನು ಎಕ್ಸ್ ಎಲ್ ಆರ್ಬಿಟ್ ಕ್ರಿಯೇಶನ್ಸ್ ಸಂಸ್ಥೆ ನಿರ್ಮಾಣ ಮಾಡಿದ್ದು, ದೀಪಕ್ ಸುಬ್ರಹ್ಮಣ್ಯ, ಪಾರ್ವತಿ ನಾಯರ್, ಶ್ರೀವತ್ಸ, ಮಧುಚಂದ್ರ, ರೂಪ ಪ್ರಭಾಕರ್, ಆನಂದ್ ನೀನಾಸಂ, ಲಕ್ಷ್ಮಿ ಕಾರಂತ್, ಸೇರಿದಂತೆ ಬಣ್ಣ ಹಚ್ಚಿದ್ದಾರೆ. ರಿತ್ವಿಕ್ ಮುರಳೀಧರ್ ಸಂಗೀತ ಸಂಯೋಜನೆ ನೀಡಿದ್ದು, ಮಧು ತುಂಬಕೆರೆ ಸಂಕಲನ, ರವೀಂದ್ರನಾಥ್ ಟಿ ಛಾಯಾಗ್ರಹಣ, ಧನಂಜಯ ಮತ್ತು ಶ್ರೇಷ್ ರಾವ್ ಅವರ ನೃತ್ಯ ನಿರ್ದೇಶನ, ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನವಿದೆ.