ನಿಮ್ಮ ಕನಸಿನ ಮನೆ ಸಿದ್ದಗೊಂಡಿದೆಯೇ? ಅದರ ಲಿವಿಂಗ್ ರೂಮ್ ಹೇಗೆ ತಯಾರು ಮಾಡಬೇಕು ಎಂಬ ಯೋಚನೆಯಲ್ಲಿದ್ದೀರಾ? ಹಾಗಿದ್ದರೆ ಇಲ್ಲಿ ಕೇಳಿ.
ನಿಮ್ಮ ಮನೆಯ ಸೋಫಾ ವಿನ್ಯಾಸ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂಬುದು ನಿಮಗೆ ತಿಳಿದ ವಿಷಯವೇ. ಹಾಗಾಗಿ ಸೋಫಾ ಖರೀದಿಸುವ ಮುನ್ನ ನಿಮ್ಮ ಮನೆಯ ಕೊಠಡಿ ಅಥವಾ ಹಾಲ್ ಎಷ್ಟು ದೊಡ್ಡದಿದೆ ಎಂಬುದನ್ನು ಸರಿಯಾಗಿ ಅಂದಾಜು ಮಾಡಿಕೊಳ್ಳಿ ಸಣ್ಣ ಕೊಠಡಿಗೆ ದೊಡ್ಡ ಸೋಫಾ ಅಥವಾ ದೊಡ್ಡ ಕೊಠಡಿಗೆ ಸಣ್ಣ ಸೋಫಾ ಸರಿ ಹೊಂದದು.
ಖರೀದಿಗೆ ತೆರಳುವ ಮುನ್ನವೇ ಟೇಪ್ ಸಹಾಯದಿಂದ ಸರಿಯಾಗಿ ಅಳತೆ ಮಾಡಿಕೊಳ್ಳಿ. ನಿಮ್ಮ ಹಾಲ್ ನ ಗೋಡೆಯ ಬಣ್ಣಕ್ಕೆ ಸರಿ ಹೊಂದುವ ಸೋಫಾವನ್ನು ಖರೀದಿಸಿ ಅಥವಾ ಅದೇ ಬಣ್ಣದ ಕವರ್ ಹೊಲಿಸಿ.
ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವು ವಿನ್ಯಾಸದ ವೈವಿಧ್ಯದ ಸೋಫಾಗಳು ಲಭ್ಯವಿವೆ. ನಿಮ್ಮ ಮನೆಗೆ ಸೂಕ್ತವಾಗುವ ವಿನ್ಯಾಸವನ್ನು ಆಯ್ದುಕೊಳ್ಳಲು ಮರೆಯದಿರಿ. ಯಾವ ಜಾಗದಲ್ಲಿ ಸೋಫಾ ಇಡಬೇಕು ಎಂಬುದನ್ನು ಮೊದಲೇ ನಿರ್ಧರಿಸಿ.