ಇದೊಂದು ವಿಚಿತ್ರವಾದ ಘಟನೆ. ಇದನ್ನ ಕಣ್ಣಾರೆ ಕಂಡವರು ಕೂಡ ನಂಬೋದಕ್ಕೆ ಸಾಧ್ಯವಿಲ್ಲ. ಸದ್ಯಕ್ಕೆ ಎಲ್ಲರಿಗೂ ಕಾಡ್ತಿರುವ ಪ್ರಶ್ನೆ ಒಂದೇ, ಅದ್ಹೇಗೆ ಸಾಧ್ಯ ಅಂತ. ಅಷ್ಟಕ್ಕೂ ಆಗಿದ್ದು ಏನಂದ್ರೆ, ಯುಪಿ ಫಿರೋಜಾಬಾದ್‌ನಲ್ಲಿ ಹರಿಭೇಜಿ ಅನ್ನೊ ಮಹಿಳೆ ಅನಾರೋಗ್ಯದ ಕಾರಣಕ್ಕಾಗಿ, ನಗರದ ಟ್ರಾಮಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಕೆಯನ್ನ ಪರೀಕ್ಷಿಸಿದ ವೈದ್ಯರು. ಆಕೆ ಸಾವನ್ನಪ್ಪಿರುವ ಸುದ್ದಿಯನ್ನ ಸಂಬಂಧಿಕರಿಗೆ ತಿಳಿದ್ದಾರೆ. ಹರಿಭೇಜಿಯವರನ್ನ ಕಳೆದುಕೊಂಡ ಪತಿ ಸುಗರ್‌ಸಿಂಗ್ ಹಾಗೂ ಕುಟುಂಬದವರು ನೋವಲ್ಲೇ ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದಾರೆ. ಈ ನಡುವೆ ಆಕೆ ಉಸಿರಾಡುವುದಕ್ಕೆ ಆರಂಭಿಸಿದ್ದಾಳೆ. ಅಷ್ಟೆ ಅಲ್ಲ ಕಣ್ಣನ್ನೂ ತೆರೆದಿದ್ದಾರೆ. ತಕ್ಷಣವೇ ಆಕೆ ಸುಧಾರಿಸಿಕೊಳ್ಳಲೆಂದು ಆಕೆಗೆ ಚಹಾ ಕುಡಿಯಲು ಕೊಟ್ಟಿದ್ದಾರೆ. ಬದುಕಿದ್ದಾಕೆಯನ್ನ, ಸತ್ತಿದ್ದಾಳೆ ಎಂದು ಹೇಳಿದ ವೈದ್ಯರಿಗೆ ಎಲ್ಲರೂ ಶಾಪ ಹಾಕಿದರು.
ಎಲ್ಲವೂ ಸರಿ ಹೋಗಿದೆ ಅಂದುಕೊಳ್ಳುವಷ್ಟರಲ್ಲಿ ಒಂದು ದಿನದ ನಂತರ ಆಕೆ ಕೊನೆಯುಸಿರೆಳೆದಿದ್ದಾರೆ. ಈ ಘಟನೆಯಿಂದಾಗಿ ಆ ಮಹಿಳೆಯ ಕುಟುಂಬದವರು ಗೊಂದಲಕ್ಕೊಳಗಾಗಿದ್ದಾರೆ.
ಅಸಲಿಗೆ ಹರಿಭೇಜಿಯವರನ್ನ ಆಸ್ಪತ್ರೆಗೆ ಸೇರಿಸಿದಾಗ ವೈದ್ಯರು ಆಕೆಯನ್ನ ಪರೀಕ್ಷಿಸಿದ್ದಾರೆ. ಆಗ ಇವರ ಮೆದುಳು ಮತ್ತು ಹೃದಯ ಕೆಲಸ ಮಾಡುವುದನ್ನ ನಿಲ್ಲಿಸಿತ್ತು. ಇದರ ಆಧಾರದ ಮೇಲೆ ವೈದ್ಯರು ಆಕೆ ಸತ್ತು ಹೋಗಿರುವ ವಿಷಯವನ್ನ ಮನೆಯವರಿಗೆ ಹೇಳಿದ್ದರು.
ವೈದ್ಯರು ಹೇಳುವ ಪ್ರಕಾರ, ಆಕೆಯ ಹೃದಯ ಮತ್ತು ಮೆದುಳು ಮತ್ತೆ ಕಾರ್ಯಗತವಾಗಿರುವುದರಿಂದ ಆಕೆ ಮತ್ತೆ ಉಸಿರಾಡಲು ಸಾಧ್ಯವಾಗಿದೆ. ಆದರೆ ತಾವು ಪರೀಕ್ಷೆ ಮಾಡಿದಾಗ, ಅವು ಸ್ತಬ್ಧವಾಗಿದ್ದವು. ಇದರ ಆಧಾರದ ಮೇಲೆಯೇ ಯಾರು ಬದುಕಿದ್ದಾರೆ. ಯಾರು ಸತ್ತಿದ್ದಾರೆ ಅಂತ ಹೇಳುತ್ತೇವೆ. ಇಂತಹ ಪ್ರಕರಣ ತುಂಬಾ ಅಪರೂಪ ಎಂದಿದ್ದಾರೆ.