ದೇಶವನ್ನು ಕೂಡಲೇ ಹಿಂದೂ ರಾಷ್ಟ್ರ ಎಂದು ಘೋಷಿಸಬೇಕು, ಇಲ್ಲವಾದರೆ ಜಲ ಸಮಾಧಿ ಆಗುವೆ ಎಂದು ಜಗದ್ಗುರು ಪರಮಹಂಸ ಆಚಾರ್ಯ ಮಹಾರಾಜ್ ಅವರು ಒತ್ತಾಯಿಸಿದ್ದಾರೆ. ಅಕ್ಟೋಬರ್ 2ರ ಗಾಂಧಿ ಜಯಂತಿ ಒಳಗಾಗಿ ಭಾರತಕ್ಕೆ ಹಿಂದೂಗಳ ದೇಶ ಎಂಬ ಹಣೆಪಟ್ಟಿ ಸಿಗಬೇಕು. ಇಲ್ಲವಾದರೆ ’ಜಲ ಸಮಾಧಿ’ ಮೂಲಕ ಪ್ರಾಣತ್ಯಾಗ ಮಾಡುವುದಾಗಿ ಮಹಾರಾಜ್ ಸರ್ಕಾರಕ್ಕೆ ಬೆದರಿಕೆ ಹಾಕಿದ್ದಾರೆ.
ಅಯೋಧ್ಯೆಯ ಸರಯೂ ನದಿಯಲ್ಲೇ ಜಲ ಸಮಾಧಿ ಮೂಲಕ ಪ್ರಾಣ ಬಿಡುವೆ ಎಂದಿರುವ ಆಚಾರ್ಯ ಮಹಾರಾಜ್ ಅವರದ್ದು ಮತ್ತೊಂದು ಪ್ರಮುಖ ಬೇಡಿಕೆಯೂ ಇದೆ. ಅದೇನೆಂದರೆ, ಕೇಂದ್ರ ಸರ್ಕಾರವು ಕೂಡಲೇ ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರ ಪೌರತ್ವವವನ್ನು ರದ್ದುಗೊಳಿಸಬೇಕಂತೆ!
ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಅ.1ರಿಂದ ಅಂಚೆ ಕಚೇರಿ ಎಟಿಎಂ ಕಾರ್ಡ್ ಬಳಕೆದಾರರ ಜೇಬಿಗೆ ಬೀಳಲಿದೆ ಕತ್ತರಿ
ಈ ಹಿಂದೆ ಕೂಡ ಆಚಾರ್ಯ ಮಹಾರಾಜ್ ಅವರು 15 ದಿನಗಳ ಉಪವಾಸ ಮಾಡಿ ಸಾವಿನ ದವಡೆಗೆ ತಲುಪುವ ಸಂಕಲ್ಪ ಮಾಡಿದ್ದರು. ಆದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಭರವಸೆ ಸಿಕ್ಕ ಬಳಿಕ ನಿರಶನ ಮುರಿದಿದ್ದರು. ಆಚಾರ್ಯ ಮಹಾರಾಜ್‌ರಿಗೆ ಬೆಂಬಲವಾದಿ ’ಹಿಂದೂ ಸನಾತನ ಧರ್ಮ ಸಂಸದ್ ’ ಸಭೆ ಆಯೋಜಿಸುವುದಾಗಿ ಅಯೋಧ್ಯೆಯ ಸಂತ ಸಮುದಾಯ ಕೂಡ ಘೋಷಣೆ ಮಾಡಿದೆ.
2022ರ ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೆ ಎಲ್ಲ ರಾಜಕೀಯ ಪಕ್ಷ ಗಳು ಭರದ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲೇ ಆಚಾರ್ಯ ಮಹಾರಾಜ್ ಅವರ ಒತ್ತಾಯವು ಮುನ್ನೆಲೆಗೆ ಬಂದಿರುವುದು ವಿಶೇಷವಾಗಿದೆ. ಇದರ ರಾಜಕೀಯ ಪರಿಣಾಮಗಳ ಬಗ್ಗೆ ಕಾದು ನೋಡಬೇಕಿದೆ.