
ಹೌದು, ಇಂಗ್ಲೆಂಡ್ ಜೆರ್ಸಿ ಧರಿಸಿದ್ದ ವ್ಯಕ್ತಿಯೊಬ್ಬರು, ಆಸ್ಟ್ರೇಲಿಯಾದ ಜೆರ್ಸಿ ಧರಿಸಿದ್ದ ಯುವತಿಗೆ ಪ್ರಪೋಸ್ ಮಾಡಲು ಮೊಣಕಾಲಿನ ಮೇಲೆ ಕುಳಿತಿರುವ ವಿಡಿಯೋ ವೈರಲ್ ಆಗಿದೆ. ಬಿಯರ್ ಕುಡಿಯುವುದರಲ್ಲಿ ತಲ್ಲೀನಳಾಗಿದ್ದ ಯುವತಿ ಬಳಿ ತೆರಳಿದ ಇಂಗ್ಲೆಂಡ್ ವ್ಯಕ್ತಿ, ತನ್ನ ಜೇಬಿನಿಂದ ಉಂಗುರವನ್ನು ಹೊರತೆಗೆಯುವುದನ್ನು ನೋಡಿ ಅಚ್ಚರಿಗೊಳಗಾಗಿದ್ದಾಳೆ. ಇಡೀ ದೃಶ್ಯವನ್ನು ಕ್ಯಾಮರಾ ಸೆರೆಹಿಡಿದಿದ್ದು, ಸ್ಟೇಡಿಯಂನ ದೈತ್ಯ ಪರದೆಯ ಮೇಲೆ ಡಿಸಿಷನ್ ಪೆಂಡಿಂಗ್ (ನಿರ್ಧಾರ ಬಾಕಿಯಿದೆ) ಎಂಬ ಪದಗಳೊಂದಿಗೆ ಪ್ರದರ್ಶಿಸಲಾಯಿತು.
ಯುವತಿ ಕೆಲವು ಸೆಕೆಂಡುಗಳ ನಂತರ ಆತನ ಪ್ರೀತಿಗೆ ಒಪ್ಪಿಗೆ ಸೂಚಿಸಿದ್ದಾಳೆ. ಆಕೆ ಒಪ್ಪಿಗೆ ಕೊಟ್ಟ ಕೂಡಲೇ ಇಬ್ಬರೂ ಸಂತೋಷದಲ್ಲಿ ಮುಳುಗಿದ್ದಾರೆ. ಈ ಜೋಡಿಯನ್ನು ರಾಬ್ ಮತ್ತು ನ್ಯಾಟ್ ಎಂದು ಗುರುತಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ನೂತನ ಪ್ರೇಮಿಗಳಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.