
ವರ್ಷದ ಕೊನೆಯ ಸೂರ್ಯ ಗ್ರಹಣ ಡಿಸೆಂಬರ್ 4 ಅಂದ್ರೆ ನಾಳೆ ಸಂಭವಿಸಲಿದೆ. ನಾಳೆ ಸಂಭವಿಸುವ ಕೊನೆ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಗ್ರಹಣ ದಕ್ಷಿಣ ಅಮೆರಿಕಾ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ದಕ್ಷಿಣ ಅಟ್ಲಾಂಟಿಕ್ ದೇಶಗಳಲ್ಲಿ ಗೋಚರಿಸಲಿದೆ.
ಹಿಂದೂ ಕ್ಯಾಲೆಂಡರ್ ಪ್ರಕಾರ ಕೃಷ್ಣ ಪಕ್ಷದ ಅಮವಾಸ್ಯೆ ತಿಥಿಯಂದು ಸಂಭವಿಸಲಿದೆ. ಗ್ರಹಣವನ್ನು ಶಾಸ್ತ್ರಗಳಲ್ಲಿ ಅಶುಭವೆಂದು ಪರಿಗಣಿಸಲಾಗಿದೆ. ಡಿಸೆಂಬರ್ 4 ರಂದು ಬೆಳಿಗ್ಗೆ 10.59 ಗಂಟೆಗೆ ಭಾಗಶಃ ಸೂರ್ಯಗ್ರಹಣ ಗೋಚರಿಸಲಿದೆ. ಮಧ್ಯಾಹ್ನ 12.30ರ ಸುಮಾರಿಗೆ ಸಂಪೂರ್ಣ ಗ್ರಹಣ ಪ್ರಾರಂಭವಾಗಲಿದೆ. ಮಧ್ಯಾಹ್ನ 1.03 ಕ್ಕೆ ಗರಿಷ್ಠ ಗ್ರಹಣ ಗೋಚರಿಸಲಿದೆ. ಪೂರ್ಣ ಗ್ರಹಣ ಮಧ್ಯಾಹ್ನ 1.36 ಕ್ಕೆ ಕೊನೆಗೊಳ್ಳಲಿದೆ. ಮಧ್ಯಾಹ್ನ 3.7 ಗಂಟೆಗೆ ಭಾಗಶಃ ಗ್ರಹಣ ಮುಗಿಯಲಿದೆ.

ಸೂರ್ಯ ಗ್ರಹಣದ ಮುಂಚಿನ ಅಶುಭ ಸಮಯವನ್ನು ಸೂತಕ ಎಂದು ಕರೆಯಲಾಗುತ್ತದೆ. ಸೂತಕದ ಸಮಯದಲ್ಲಿ ಭೂಮಿಯ ವಾತಾವರಣವು ಕಲುಷಿತಗೊಳ್ಳುತ್ತದೆ. ಸೂತಕದ ಸಮಯದಲ್ಲಿ ಯಾವುದೇ ಆಹಾರ ಸೇವನೆ ಮಾಡಬಾರದು. ಸೂರ್ಯಗ್ರಹಣಕ್ಕೆ ಹನ್ನೆರಡು ಗಂಟೆಗಳ ಮೊದಲು ಯಾವುದೇ ಆಹಾರ ತಿನ್ನಬಾರದು. ಮಕ್ಕಳು, ಗರ್ಭಿಣಿಯರು, ರೋಗಿಗಳು ಮತ್ತು ವೃದ್ಧರು ಆಹಾರ ಸೇವನೆ ಮಾಡಬಹುದು. ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸದ ಕಾರಣ ಸೂತಕ ಅನ್ವಯವಾಗುವುದಿಲ್ಲ.

ಗರ್ಭಿಣಿಯರು ಗ್ರಹಣ ಸಮಯದಲ್ಲಿ ಹೊರಗೆ ಹೋಗಬಾರದು. ರಾಹು ಮತ್ತು ಕೇತುಗಳ ಕಲುಷಿತ ಮತ್ತು ದುಷ್ಪರಿಣಾಮಗಳ ಕಾರಣದಿಂದಾಗಿ, ಮಗು ಅಂಗವಿಕಲವಾಗುವ ಸಾಧ್ಯತೆಯಿದೆ. ಗರ್ಭಪಾತವಾಗುವ ಅಪಾಯವಿದೆ. ಹಾಗೆ ಗರ್ಭಿಣಿಯರು ಯಾವುದೇ ಬಟ್ಟೆಯನ್ನು ಕತ್ತರಿಸಬಾರದು ಅಥವಾ ಹೊಲಿಯಬಾರದು ಅಥವಾ ಇತರ ಯಾವುದೇ ರೀತಿಯ ಚಟುವಟಿಕೆಗಳನ್ನು ಮಾಡಬಾರದು ಎಂದು ಸಲಹೆ ನೀಡಲಾಗಿದೆ.

ಇದಲ್ಲದೆ ಗ್ರಹಣ ಕಾಲದಲ್ಲಿ ಎಣ್ಣೆ ಮಸಾಜ್ ಮಾಡಬಾರದು. ನೀರು ಕುಡಿಯಬಾರದು. ಮಲ-ಮೂತ್ರ ವಿಸರ್ಜನೆ ಮಾಡಬಾರದು. ಕೂದಲನ್ನು ಬಾಚಿಕೊಳ್ಳಬಾರದು, ಹಲ್ಲುಜ್ಜಬಾರದು. ಸೂರ್ಯಗ್ರಹಣದ ಸಮಯದಲ್ಲಿ ಲೈಂಗಿಕ ಚಟುವಟಿಕೆ ನಡೆಸಬಾರದು. ಸೂರ್ಯಗ್ರಹಣದ ನಂತರ ಬೇಯಿಸಿದ ಹಳೆ ಆಹಾರವನ್ನು ಸೇವನೆ ಮಾಡಬಾರದು. ಸೂರ್ಯಗ್ರಹಣದ ನಂತರ ಹೊಸದಾಗಿ ಬೇಯಿಸಿದ ಆಹಾರವನ್ನು ಮಾತ್ರ ಸೇವಿಸಬೇಕು. ಗ್ರಹಣ ಸಂದರ್ಭದಲ್ಲಿ ಆಹಾರ ಪದಾರ್ಥಗಳಾದ ಗೋಧಿ, ಅಕ್ಕಿ, ಇತರ ಧಾನ್ಯಗಳು ಮತ್ತು ಉಪ್ಪಿನಕಾಯಿಗಳಿಗೆ ತುಳಸಿ ಹಾಕಿಡಬೇಕು. ಗ್ರಹಣದ ಸಮಯದಲ್ಲಿ ಬ್ರಾಹ್ಮಣರಿಗೆ ದಾನ ಮಾಡಬೇಕು.
