ಸಾವಿಗೆ ಹೆದರದವರಿಲ್ಲ. ಪ್ರತಿಯೊಬ್ಬರಲ್ಲೂ ಸಾವಿನ ಭಯವಿರುತ್ತದೆ. ಸಾವಿನ ಬಗ್ಗೆ ಅನೇಕ ಅಧ್ಯಯನ, ಸಂಶೋಧನೆ ನಡೆದಿದೆ. ಧರ್ಮ ಪುರಾಣಗಳಲ್ಲಿ ಸಾವಿನ ಬಗ್ಗೆ, ಆತ್ಮದ ಬಗ್ಗೆ ಹೇಳಲಾಗಿದೆ. ಸಾವಿಗೂ ಮುನ್ನ ಕೆಲ ಮುನ್ಸೂಚನೆ ಸಿಗುತ್ತದೆ ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಕನಸಿನಲ್ಲಿ ಕೆಲ ಮುನ್ಸೂಚನೆ ಸಿಗುತ್ತದೆ ಎಂದು ಸ್ವಪ್ನ ಶಾಸ್ತ್ರದಲ್ಲಿ ಹೇಳಲಾಗಿದೆ.
ಹಗಲಿನಲ್ಲೂ ಆಕಾಶದಲ್ಲಿ ನಕ್ಷತ್ರಗಳು ಗೋಚರಿಸುವ ಕನಸು ಬಿದ್ದರೆ ಕಾಮನಬಿಲ್ಲು ಕಂಡುಬಂದರೆ ಸಾವು ಹತ್ತಿರ ಬರ್ತಿದೆ ಎಂಬ ಸಂಕೇತ.
ಹೊಂಡ ಅಥವಾ ಕಂದಕದಲ್ಲಿ ನೀವು ಬಿದ್ದಿದ್ದು, ಎಷ್ಟೇ ಪ್ರಯತ್ನ ಪಟ್ಟರೂ ಅದರಿಂದ ಹೊರ ಬರಲು ಸಾಧ್ಯವಾಗದೆ ಹೋದ ಕನಸು ಕೂಡ ಸಾವಿನಂಚಿನ ಸಂಕೇತವಾಗಿದೆ.
ಕನಸಿನಲ್ಲಿ ಸೋರೆಕಾಯಿ, ನಿಂಬೆ, ಸೌತೆಕಾಯಿ ಮತ್ತು ಕಲ್ಲಂಗಡಿ ತಿಂದಂತೆ ಕಂಡರೆ ಅದು ಸಾವಿನ ಸಂಕೇತವಾಗಿದೆ. ಸಾವು ಬರದೆ ಹೋದ್ರೂ ಸಾವಿನಂತಹ ಕಷ್ಟ ಎದುರಿಸಬೇಕಾಗುತ್ತದೆ.
ನೀರು ಅಥವಾ ಎಣ್ಣೆಯಲ್ಲಿ ನೆರಳು ಕಾಣಿಸಿಕೊಳ್ಳದೆ ಹೋದ್ರೆ ಸಾವು ಹತ್ತಿರ ಬರ್ತಿರುವ ಸಂಕೇತ ಎನ್ನಲಾಗುತ್ತದೆ.
ಕನಸಿನಲ್ಲಿ ದೇವಸ್ಥಾನದಿಂದ, ಹಾಸಿಗೆಯಿಂದ ಅಥವಾ ಕುದುರೆಯಿಂದ ಬಿದ್ದಂತೆ ಕಾಣಿಸಿದ್ರೆ ಸಾವು ಹತ್ತಿರ ಬರ್ತಿದೆ ಎಂಬ ಸಂಕೇತ. ಅಂಥವರು ಮಹಾಮೃತ್ಯುಂಜಯ ಮಂತ್ರವನ್ನು ಜಪಿಸಬೇಕು. ಜಾತಕ ತೋರಿಸಿ ಪರಿಹಾರ ಕಂಡುಕೊಳ್ಳಬೇಕು.
ರಣಹದ್ದು ತಲೆಯ ಮೇಲೆ ಸುಳಿದಾಡುವ ಕನಸು ಬಿದ್ದಲ್ಲಿ ಇದು ಕೂಡ ಅಶುಭ ಸಂಕೇತವಾಗಿದೆ.
ಕನಸಿನಲ್ಲಿ, ಹದಿನಾರು ಅಲಂಕೃತ ಮಹಿಳೆಯರು ಕೆಂಪು ಬಟ್ಟೆಯಲ್ಲಿ ಕಾಣಿಸಿಕೊಂಡರೆ ಶೀರ್ಘದಲ್ಲೇ ವ್ಯಕ್ತಿ ಸಾವನ್ನಪ್ಪುತ್ತಾನೆ ಎಂಬ ಸಂಕೇತವಾಗಿದೆ ಎಂದು ಸ್ವಪ್ನ ಶಾಸ್ತ್ರದಲ್ಲಿ ಹೇಳಲಾಗಿದೆ.