
ತುಮಕೂರು: ಸಗಣಿ ಗಂಜಲದ ಗುಂಡಿಗೆ ಬಿದ್ದು ತಂದೆ, ಮಗ ಸಾವನ್ನಪ್ಪಿದ ಘಟನೆ ಹಿರಿಯೂರು ತಾಲೂಕಿನ ಗೌಡನಹಳ್ಳಿಯಲ್ಲಿ ಗುರುವಾರ ನಡೆದಿದೆ.
ಮಹಾಲಿಂಗಪ್ಪ(45) ಮತ್ತು ಅವರ ಪುತ್ರ ಪೃಥ್ವಿರಾಜ್(22) ಮೃತಪಟ್ಟವರು. ತಮ್ಮ ಜಮೀನಿನಲ್ಲಿರುವ ಅಡಿಕೆ ಸಸಿಗಳಿಗೆ ಹಸುಗಳ ಗಂಜಲ ತೆಗೆದುಕೊಂಡು ಹೋಗಲು 7 ಅಡಿ ಆಳದ ಸಂಪ್ ನಲ್ಲಿದ್ದ ಗಂಜಲವನ್ನು ಬಕೆಟ್ ನಿಂದ ಟ್ರ್ಯಾಕ್ಟರ್ ಗೆ ತುಂಬಿಸುವಾಗ ಘಟನೆ ನಡೆದಿದೆ.
ಮಹಾಲಿಂಗಪ್ಪ ಗಂಜಲ ತುಂಬಿಸುವ ವೇಳೆ ಕಾಲು ಜಾರಿ ಗುಂಡಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಬಂದ ಮಗನನ್ನು ಬಿಗಿಯಾಗಿ ಹಿಡಿದುಕೊಂಡಿದ್ದರಿಂದ ಇಬ್ಬರೂ ಗುಂಡಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.