ಬೆಂಗಳೂರು: ಒಂದು ವರ್ಷಕ್ಕಿಂತ ಹಿಂದಿನ ಸಾವಿನ ಪ್ರಕರಣಗಳಲ್ಲಿ ಮರಣ ಪ್ರಮಾಣ ಪತ್ರ ಪಡೆಯಲು ಇನ್ನು ನ್ಯಾಯಾಲಯದ ಮೊರೆ ಹೋಗಬೇಕಿಲ್ಲ. ಒಂದು ವರ್ಷದ ಹಿಂದೆ ಸಾವಾಗಿದ್ದಲ್ಲಿ ಕೋರ್ಟ್ ಮೊರೆ ಕಡ್ಡಾಯ ಎನ್ನುವ ಷರತ್ತನ್ನು ರಾಜ್ಯ ಸಚಿವ ಸಂಪುಟ ರದ್ದು ಮಾಡಿದೆ.
ವರ್ಷಕ್ಕಿಂತ ಹಿಂದಿನ ಸಾವಿನ ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶದ ಮೂಲಕವೇ ಮರಣ ಪ್ರಮಾಣ ಪತ್ರ ಪಡೆಯಬೇಕು ಎನ್ನುವ ಷರತ್ತು ರದ್ದುಗೊಳಿಸುವ ಜನನ ಮತ್ತು ಮರಣ ತಿದ್ದುಪಡಿ ವಿಧೇಯಕಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯ ಬಳಿಕ ಸಚಿವ ಹೆಚ್.ಕೆ. ಪಾಟೀಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮರಣ ಪ್ರಮಾಣ ಪತ್ರದಲ್ಲಿ ಲಭ್ಯವಿದ್ದಲ್ಲಿ ಕಾಯಿಲೆಯ ಅಥವಾ ಆಸ್ಪತ್ರೆಯ ಹಿನ್ನೆಲೆಯನ್ನು ದಾಖಲಿಸಿ ಡಿಜಿಟಲ್ ಜನನ ಮತ್ತು ಮರಣ ಪ್ರಮಾಣ ಪತ್ರ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.