alex Certify ‘ಡಿಯರ್ ಸಚಿನ್’ ಎಂದು ತೆಂಡೂಲ್ಕರ್ ಮನೆಯಿಂದ ಕೇಳಿಬರುತ್ತಿದ್ದ ಸದ್ದಿನ ಬಗ್ಗೆ ನೆರೆಮನೆಯವರ ದೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಡಿಯರ್ ಸಚಿನ್’ ಎಂದು ತೆಂಡೂಲ್ಕರ್ ಮನೆಯಿಂದ ಕೇಳಿಬರುತ್ತಿದ್ದ ಸದ್ದಿನ ಬಗ್ಗೆ ನೆರೆಮನೆಯವರ ದೂರು

'Dear Sachin': Tendulkar's Neighbour Complains of Loud Construction Noise At His Home in Viral Post

ಕಟ್ಟಡ ನಿರ್ಮಾಣ ಅಥವಾ ಕಾಮಗಾರಿ ವೇಳೆ ಭಾರೀ ಯಂತ್ರಗಳು ಮತ್ತು ಬುಲ್ಡೋಜರ್ ಗಳ ಶಬ್ಧ ಕಿರಿಕಿರಿ ಉಂಟುಮಾಡುವುದು ಸಾಮಾನ್ಯ. ಇಂತಹ ಕಿರಿಕಿರಿಯನ್ನು ಅನುಭವಿಸ್ತಿದ್ದ ವ್ಯಕ್ತಿಯೊಬ್ಬರು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ರನ್ನು ಟ್ಯಾಗ್ ಮಾಡಿ ಬೇಸರ ಹೊರಹಾಕಿದ್ದಾರೆ.

ಮುಂಬೈನ ಬಾಂದ್ರಾದಲ್ಲಿರುವ ಸಚಿನ್ ತೆಂಡೂಲ್ಕರ್ ಅವರ ಮನೆಯ ಬಳಿ ಕೇಳಿಬರುತ್ತಿದ್ದ ಸಿಮೆಂಟ್ ಮಿಕ್ಸರ್‌ನ ನಿರಂತರ ಶಬ್ಧದಿಂದ ಬೇಸರಗೊಂಡ ಸಚಿನ್ ನೆರೆಮನೆಯವರು ಟ್ವಿಟರ್ ನಲ್ಲಿ ಮನವಿ ಮಾಡಿದ್ದಾರೆ.

ದಿಲೀಪ್ ಡಿಸೋಜಾ ಅವರ ಪೋಸ್ಟ್ ನಲ್ಲಿ, “ಆತ್ಮೀಯ ಸಚಿನ್ ತೆಂಡೂಲ್ಕರ್, ಈಗ ಸುಮಾರು ರಾತ್ರಿ 9 ಗಂಟೆಯಾಗಿದೆ. ನಿಮ್ಮ ಬಾಂದ್ರಾದ ಮನೆಯ ಹೊರಗೆ ಇಡೀ ದಿನ ಜೋರಾಗಿ ಕೇಳುತ್ತಿದ್ದ ಸಿಮೆಂಟ್ ಮಿಕ್ಸರ್ ನ ಶಬ್ದ ಇನ್ನೂ ಕೇಳಿಬರುತ್ತಿದೆ. ದಯವಿಟ್ಟು ನಿಮ್ಮ ಮನೆಯಲ್ಲಿ ಕೆಲಸ ಮಾಡುವ ಜನರನ್ನು ನಿರ್ದಿಷ್ಟ ಸಮಯಕ್ಕೆ ಈ ಕೆಲಸವನ್ನು ನಿಗದಿಪಡಿಸಿಕೊಳ್ಳುವಂತೆ ನೀವು ಕೇಳಬಹುದೇ? ತುಂಬಾ ಧನ್ಯವಾದಗಳು” ಎಂದು ಕೇಳಿಕೊಂಡಿದ್ದಾರೆ.

ಡಿಸೋಜಾ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಲವು ಪ್ರತಿಕ್ರಿಯೆ ಮತ್ತು ಟೀಕೆಗಳನ್ನು ಸೃಷ್ಟಿಸಿದೆ. ಕೆಲವರು ಡಿಸೋಜಾ ಅವರು ತಮ್ಮ ಅಸಮಾಧಾನವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಲು ಆಯ್ಕೆ ಮಾಡಿಕೊಂಡ ರೀತಿಯನ್ನು ಪ್ರಶ್ನಿಸಿದ್ದಾರೆ “ನೀವು ಅಧಿಕಾರಿಗಳನ್ನು ಸಂಪರ್ಕಿಸಿ ಅದರ ಬಗ್ಗೆ ಸರಿಯಾದ ರೀತಿಯಲ್ಲಿ ಹೇಳಬಹುದಿತ್ತು. ಬದಲಿಗೆ ನಿಮಗೆ ಇಲ್ಲಿ ಪ್ರಚಾರ ಬೇಕು” ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಹೀಗೆ ಹೇಳಿದ್ದೀರ ಎಂದಿದ್ದಾರೆ. ನೀವು ಮುಂಬೈ ಪೊಲೀಸರನ್ನು ಟ್ಯಾಗ್ ಮಾಡುವ ಬದಲು ಸಚಿನ್ ತೆಂಡೂಲ್ಕರ್ ಅವರನ್ನು ಟ್ಯಾಗ್ ಮಾಡಿದ್ದೀರಿ. ಅಲ್ಲದೆ, ಕಟ್ಟಡ ನಿರ್ಮಾಣ ಚಟುವಟಿಕೆಗೆ BMC ಯಿಂದ ರಾತ್ರಿ 10 ಗಂಟೆಯವರೆಗೆ ಅನುಮತಿ ಇದೆ ಎಂದು ಟೀಕಿಸಿದ್ದಾರೆ.

“ಓಹ್ ವಾವ್ ನೀವು ಸಚಿನ್ ನೆರೆಹೊರೆಯವರು,” ಎಂದು ಮತ್ತೊಬ್ಬರು ಹಾಸ್ಯದಿಂದ ಲೇವಡಿ ಮಾಡಿದ್ದಾರೆ. ಆದರೂ ಸಚಿನ್ ಸ್ವತಃ ಈ ಪೋಸ್ಟ್ ಗೆ ಪ್ರತಿಕ್ರಿಯಿಸಿಲ್ಲ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...