ಹಾಸನ: ಅಂತ್ಯಕ್ರಿಯೆ ನಡೆದು ಮೂರು ತಿಂಗಳ ಬಳಿಕ ಮೃತದೇಹ ನಾಪತ್ತೆಯಾಗಿದ್ದು, ಸಮಾಧಿಯನ್ನು ಅಗೆದು ಶವ ತೆಗೆದುಕೊಂಡು ಹೋಗಲಾಗಿದೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಯಾದಾಪುರ ಗ್ರಾಮದಲ್ಲಿ ಸಮಾಧಿಯಲ್ಲಿದ್ದ ಮಹಿಳೆಯ ಮೃತದೇಹ ನಾಪತ್ತೆಯಾಗಿದೆ. ಕಳೆದ ಜೂನ್ ನಲ್ಲಿ ವಯೋಸಹಜ ಕಾಯಿಲೆಯಿಂದ ಲಕ್ಷ್ಮಮ್ಮ ಅವರು ಮೃತಪಟ್ಟಿದ್ದರು. ಅವರ ಜಮೀನಿನಲ್ಲಿ ಕುಟುಂಬದವರು ಅಂತ್ಯಕ್ರಿಯೆ ನೆರವೇರಿಸಿದ್ದರು.
ಸೆಪ್ಟೆಂಬರ್ 21 ರಂದು ರಾತ್ರಿ ಮೃತದೇಹವನ್ನು ಹೊತ್ತುಕೊಂಡು ಹೋಗಲಾಗಿದೆ. ವಾಮಾಚಾರಕ್ಕಾಗಿ ಶವ ತೆಗೆದುಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಅವರ ಪುತ್ರ ಮೃತದೇಹ ಹುಡುಕಿಕೊಡುವಂತೆ ಅರಸೀಕೆರೆ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆನ್ನಲಾಗಿದೆ.