alex Certify ಬೆತ್ತಲೆ ಮಹಿಳೆ ಸಮುದ್ರ ತೀರದಲ್ಲಿ ಬಿದ್ದಿದ್ದಾಳೆಂದು ಧಾವಿಸಿದ ಪೊಲೀಸರಿಗೆ ಕಾದಿತ್ತು ಅಚ್ಚರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆತ್ತಲೆ ಮಹಿಳೆ ಸಮುದ್ರ ತೀರದಲ್ಲಿ ಬಿದ್ದಿದ್ದಾಳೆಂದು ಧಾವಿಸಿದ ಪೊಲೀಸರಿಗೆ ಕಾದಿತ್ತು ಅಚ್ಚರಿ…!

ಸಮುದ್ರತೀರದಲ್ಲಿ ಕೊಚ್ಚಿ ಬಂದ ಮಹಿಳೆಯ ಶವವನ್ನು ಕಂಡು ಭಯಭೀತರಾದ ಸ್ಥಳೀಯರು, ಕೊನೆಗೆ ಅದೊಂದು ಸೆಕ್ಸ್ ಡಾಲ್ ಎಂಬುದಾಗಿ ಕಂಡುಕೊಂಡಿರುವ ವಿಲಕ್ಷಣ ಘಟನೆ ಥಾಯ್ಲೆಂಡ್‌ನ ನಡೆದಿದೆ.

ಹೌದು, ಥಾಯ್ಲೆಂಡ್‌ನ ಬ್ಯಾಂಗ್ ಸೀನ್ ಜಿಲ್ಲೆಯ ಬೀಚ್‌ಗೆ ಆಗಮಿಸಿದವರು ಮರಳಿನಲ್ಲಿ ಕೊಚ್ಚಿಹೋಗಿದ್ದ ಮಹಿಳೆಯ ದೇಹವನ್ನು ಕಂಡು ಆಘಾತಕ್ಕೊಳಗಾದರು. ಕೂಡಲೇ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಮಹಿಳೆಯ ಬೆತ್ತಲೆ ದೇಹವನ್ನು ನೋಡಿ ಸ್ಥಳೀಯರು ಆಘಾತಗೊಂಡಿದ್ದಾರೆ.

ಕೂಡಲೇ ಪೊಲೀಸರು ಮತ್ತು ವೈದ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಅಪರಾಧ ತನಿಖಾ ಟೇಪ್‌ನೊಂದಿಗೆ ಪ್ರದೇಶವನ್ನು ಸೀಲ್ ಮಾಡಿದ್ದಾರೆ. ನಂತರ ಪರೀಕ್ಷಿಸಿದಾಗ ಮಹಿಳೆಯು ರಬ್ಬರ್ನಿಂದ ಮಾಡಿದ ಲೈಂಗಿಕ ಗೊಂಬೆ ಎಂಬುದು ತಿಳಿದುಬಂದಿದೆ. ಬೆತ್ತಲೆ ಶವವನ್ನು ಹೈಪರ್-ರಿಯಲಿಸ್ಟಿಕ್ ಜಪಾನೀಸ್ ಎವಿ ಐಡಲ್ ಸೆಕ್ಸ್ ಡಾಲ್ ಎಂದು ಗುರುತಿಸಲಾಗಿದೆ. ಒಂದು ಗೊಂಬೆಯ ಬೆಲೆ ಕನಿಷ್ಠ ಅಮೆರಿಕಾ ಡಾಲರ್ 500 ಆಗಿದೆ.

ಸಮುದ್ರದಲ್ಲಿ ಕೊಚ್ಚಿ ಬರೋ ಮುನ್ನ ಸೆಕ್ಸ್ ಗೊಂಬೆಯನ್ನು ನದಿ ಅಥವಾ ಕಾಲುವೆಯಲ್ಲಿ ಎಸೆಯಲಾಗಿರಬಹುದು ಅಂತಾ ಶಂಕಿಸಲಾಗಿದೆ. ಮಾಲೀಕರು ತಮ್ಮ ಸೆಕ್ಸ್ ಗೊಂಬೆಯನ್ನು ಹಿಂಪಡೆಯಲು ಬಯಸಿದರೆ, ಅವರು ರಕ್ಷಣಾ ತಂಡದಿಂದ ಸೂಕ್ತ ಮಾಹಿತಿಗಳೊಂದಿಗೆ ಅದನ್ನು ಪಡೆದುಕೊಳ್ಳಬಹುದಾಗಿದೆ ಅಂತಾ ಪೊಲೀಸರು ತಿಳಿಸಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...