ಬ್ಯಾಂಕ್, ಗ್ರಾಹಕರ ಕೆಲಸವನ್ನು ಸುಲಭಗೊಳಿಸಿದೆ. ಬ್ಯಾಂಕ್ ಗೆ ಹೋಗಿ, ಸರತಿ ಸಾಲಿನಲ್ಲಿ ನಿಂತು ನಾವೀಗ ಹಣ ಪಡೆಯಬೇಕಾಗಿಲ್ಲ. ಡಿಜಿಟಲ್ ಪಾವತಿ ಜೊತೆಗೆ ನಗದು ಬಯಸುವವರು, ಎಟಿಎಂನಲ್ಲಿ ಹಣ ವಿತ್ ಡ್ರಾ ಮಾಡಬಹುದು. ಆದ್ರೆ ಎಟಿಎಂಗೆ ಸಂಬಂಧಿಸಿದಂತೆ ಕೆಲ ಮಾಹಿತಿ ತಿಳಿದಿರುವುದು ಅವಶ್ಯಕ.
ಪತ್ನಿಯ ಸಾವಿನ ನಂತ್ರ ವ್ಯಕ್ತಿಯೊಬ್ಬ ಆಕೆ ಎಟಿಎಂ ಬಳಸಿ ಹಣ ವಿತ್ ಡ್ರಾ ಮಾಡಿದ್ದಾನೆ. ಇದು ಬ್ಯಾಂಕ್ ಗೆ ತಿಳಿದಿದೆ. ಬ್ಯಾಂಕ್, ಆ ವ್ಯಕ್ತಿ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದು, ಪೊಲೀಸರಿಗೆ ದೂರು ನೀಡಿದೆ. ಸತ್ತ ವ್ಯಕ್ತಿ ಖಾತೆಯಲ್ಲಿರುವ ಹಣವನ್ನು ಎಟಿಎಂ ಮೂಲಕ ತೆಗೆಯುವುದು ಅಪರಾಧ. ವ್ಯಕ್ತಿಯ ಸಾವಿನ ನಂತ್ರ ಆತನ ಆಸ್ತಿ ಅಥವಾ ಹಣವನ್ನು ನಾಮಿನಿಯ ಹೆಸರಿಗೆ ವರ್ಗಾಯಿಸಲು ಕಾನೂನು ಪ್ರಕ್ರಿಯೆಯಿದೆ.
ಹೂಡಿಕೆ ಹಣ ದ್ವಿಗುಣಗೊಳ್ಳುವುದು ಹೇಗೆ….? `72ರ ನಿಯಮ’ದಡಿ ಲೆಕ್ಕ ಮಾಡಿ
ತಂದೆ-ತಾಯಿ ಸಾವನ್ನಪ್ಪಿದ್ದರೂ ಅವರ ಖಾತೆಯಲ್ಲಿರುವ ಹಣವನ್ನು ಎಟಿಎಂ ಮೂಲಕ ವಿತ್ ಡ್ರಾ ಮಾಡುವಂತಿಲ್ಲ. ಈ ವಿಷ್ಯ ಬ್ಯಾಂಕಿಗೆ ಗೊತ್ತಾದಲ್ಲಿ, ಬ್ಯಾಂಕ್ ಕಾನೂನು ಕ್ರಮ ಕೈಗೊಳ್ಳುತ್ತದೆ. ಮೊದಲು ಸಾವನ್ನಪ್ಪಿದ ವ್ಯಕ್ತಿ, ಯಾವ ಖಾತೆ ಹೊಂದಿದ್ದಾನೆ ಎಂಬುದನ್ನು ತಿಳಿಯಬೇಕು. ಜಂಟಿ ಖಾತೆಯಿದೆಯಾ ಅಥವಾ ವೈಯಕ್ತಿಕ ಖಾತೆ ಹೊಂದಿದ್ದಾನಾ ಎಂಬುದನ್ನು ತಿಳಿಯಬೇಕು. ಇದಾದ ನಂತ್ರ ಆತ ಯಾರ ಹೆಸರಿಗೆ ನಾಮಿನಿ ಮಾಡಿದ್ದಾನೆ ಎಂಬುದನ್ನು ತಿಳಿಯಬೇಕು.
ಒಂದು ವೇಳೆ ಇಬ್ಬರು ನಾಮಿನಿಗಳಿದ್ದು, ಅದ್ರಲ್ಲಿ ಒಬ್ಬರ ಎಟಿಎಂನಿಂದ ಹಣ ವಿತ್ ಡ್ರಾ ಮಾಡಿದ್ದು, ಮತ್ತೊಬ್ಬ ವ್ಯಕ್ತಿ ದೂರು ನೀಡಿದ್ರೆ, ಹಣ ಪಡೆದ ವ್ಯಕ್ತಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಮೊದಲು ವ್ಯಕ್ತಿ ಸಾವನ್ನಪ್ಪಿದ್ದಾನೆಂದು ಬ್ಯಾಂಕ್ ಗೆ ತಿಳಿಸಬೇಕು. ಖಾತೆದಾರನ ಸಾವಿನ ನಂತ್ರ ನಾಮಿನಿಯು ಬ್ಯಾಂಕಿನಲ್ಲಿ ಕ್ಲೇಮ್ ಫಾರ್ಮ್ ಭರ್ತಿ ಮಾಡುವ ಮೂಲಕ ಕ್ಲೈಮ್ ಸಲ್ಲಿಸಬಹುದು. ಅರ್ಜಿ ಭರ್ತಿ ಮಾಡಿದ ನಂತ್ರ ಪಾಸ್ಬುಕ್, ಖಾತೆಯ ಟಿಡಿಆರ್, ಚೆಕ್ ಬುಕ್, ಎಟಿಎಂ ಕಾರ್ಡ್ ಮತ್ತು ಮೃತರ ಮರಣ ಪ್ರಮಾಣಪತ್ರವನ್ನು ಲಗತ್ತಿಸಬೇಕು. ನಾಮಿನೇಟ್ ಮಾಡಿದವರ ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆಯನ್ನು ನೀಡಬೇಕು.
BIG NEWS: ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ಮೀಸಲಾತಿ ಕುರಿತಂತೆ ಕೇಂದ್ರಕ್ಕೆ ʼಸುಪ್ರೀಂʼ ಪ್ರಶ್ನೆ
ನಾಮಿನಿಯ ಹೆಸರನ್ನು ಬ್ಯಾಂಕ್ ಖಾತೆಯಲ್ಲಿ ದಾಖಲಿಸದಿದ್ದರೆ, ಬ್ಯಾಂಕ್ ಖಾತೆಯಲ್ಲಿರುವ ಮೊತ್ತವನ್ನು ಸತ್ತವರ ಕಾನೂನುಬದ್ಧ ವಾರಸುದಾರರಿಗೆ ನೀಡುತ್ತದೆ. ಇದಕ್ಕೆ ಮೃತರ ಮರಣ ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ. ಮೃತರ ಕಾನೂನು ಉತ್ತರಾಧಿಕಾರಿಗೆ ಪ್ರಮಾಣಪತ್ರವನ್ನು ನೀಡಬೇಕಾಗುತ್ತದೆ.