
ತುಮಕೂರು: ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಸಮೀಪ ಮೆಕ್ಕೆಜೋಳ ತೆನೆ ಬಿಡಿಸುವ ಯಂತ್ರಕ್ಕೆ ವೇಲ್ ಸಿಲುಕಿದ ಪರಿಣಾಮ ಬಾಲಕಿ ಮೃತಪಟ್ಟ ಘಟನೆ ನಡೆದಿದೆ.
14 ವರ್ಷದ ರಮಾಬಾಯಿ ಮೃತಪಟ್ಟ ಬಾಲಕಿ ಎಂದು ಹೇಳಲಾಗಿದೆ. ಕೊಡಿಗೇನಹಳ್ಳಿ ಸಮೀಪದ ಶ್ರಾವಂಡನಹಳ್ಳಿ ಗ್ರಾಮದ ನಾಥನಾಯ್ಕ್ ಅವರ ಮನೆ ಮುಂಭಾಗದಿಂದ ಅಂಗಡಿಗೆ ಹೋಗುವಾಗ, ರಮಾಬಾಯಿ ವೇಲ್ ಮೆಕ್ಕೆಜೋಳದ ಯಂತ್ರಕ್ಕೆ ಸಿಲುಕಿದೆ. ಇದರಿಂದ ಆಯತಪ್ಪಿದ ಬಾಲಕಿ ಯಂತ್ರದ ಬೆಲ್ಟ್ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ. ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದು, ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಮೆಕ್ಕೆಜೋಳ ಯಂತ್ರದ ಮಾಲೀಕನ ನಿರ್ಲಕ್ಷ್ಯವೇ ಘಟನೆಗೆ ಕಾರಣವೆಂದು ಪೋಷಕರು ದೂರಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆನ್ನಲಾಗಿದೆ.