ಮೈಸೂರು: ಮೈಸೂರಿನ ವಿಜಯನಗರ ವಾಟರ್ ಟ್ಯಾಂಕ್ ಸಮೀಪ ನಿರ್ಮಾಣ ಹಂತದ ಕಟ್ಟಡದ ಸಂಪ್ ನಲ್ಲಿ ಉದ್ಯಮಿ ಪುತ್ರನ ಶವ ಪತ್ತೆಯಾಗಿದೆ.
ಹೆಬ್ಬಾಳು ಕೈಗಾರಿಕಾ ಪ್ರದೇಶದ ಸೆನ್ ಇಂಜಿನಿಯರಿಂಗ್ ವರ್ಕ್ಸ್ ಮಾಲಿಕ ಕೆ.ಎಂ. ಚೆರಿಯನ್ ಅವರ ಪುತ್ರ 35 ವರ್ಷದ ಕ್ರಿಸ್ಟೋ ಚೆರಿಯನ್ ಮೃತಪಟ್ಟ ವ್ಯಕ್ತಿ. ವಿಜಯನಗರ ಒಂದನೇ ಹಂತದ ನಿವಾಸಿ ಆಗಿರುವ ಕ್ರಿಸ್ಟೋ ಚೆರಿಯನ್ ಶನಿವಾರ ರಾತ್ರಿ ಮನೆಯಿಂದ ಹೊರಗೆ ಹೋದವರು ತಡರಾತ್ರಿಯಾದರೂ ವಾಪಾಸ್ ಬಂದಿರಲಿಲ್ಲ. ಭಾನುವಾರ ಬೆಳಿಗ್ಗೆ ಕುಟುಂಬದವರು ಹುಡುಕಾಟ ನಡೆಸಿದ್ದಾರೆ. ಆದರೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ನಂತರ ಲರ್ನರ್ ಪಿಯು ಕಾಲೇಜ್ ಸಮೀಪ ನಿರ್ಮಾಣ ಹಂತದ ಕಟ್ಟಡದ ನೀರಿನ ಸಂಪ್ ನಲ್ಲಿ ಕ್ರಿಸ್ಟೋ ಚೆರಿಯನ್ ಬಿದ್ದು ಮೃತಪಟ್ಟಿರುವುದು ಪತ್ತೆಯಾಗಿದೆ. ವಿಜಯನಗರ ಠಾಣೆಯಲ್ಲಿ ಆಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.