ಐವರು ಒತ್ತೆಯಾಳುಗಳು ಶವವಾಗಿ ಪತ್ತೆಯಾದ ಬೃಹತ್ ಹಮಾಸ್ ಸುರಂಗದ ಒಳಭಾಗದ ತುಣುಕನ್ನು ಇಸ್ರೇಲ್ ರಕ್ಷಣಾ ಪಡೆಗಳು ಬಿಡುಗಡೆ ಮಾಡಿವೆ. ಒತ್ತೆಯಾಳುಗಳನ್ನು ಅಕ್ಟೋಬರ್ 7 ರಂದು ಭಯೋತ್ಪಾದಕರು ಇಸ್ರೇಲ್ ನಿಂದ ಅಪಹರಿಸಿದ್ದಾರೆ ಎಂದು ವರದಿಯಾಗಿದೆ.
ಭೂಗತ ಸುರಂಗದ ಪ್ರವೇಶದ್ವಾರದ ಬಳಿ ಐಡಿಎಫ್ ಸೈನಿಕರು ಕತ್ತಲೆಯಲ್ಲಿ ನಿಂತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಗಾಝಾ ಪಟ್ಟಿಯ ಉತ್ತರಕ್ಕಿರುವ ಜಬಾಲಿಯಾ ನಗರದ ಶಾಲೆಗಳು ಮತ್ತು ಆಸ್ಪತ್ರೆಗಳ ಕೆಳಗೆ 32 ಅಡಿ ಕೆಳಗೆ ಈ ಸಂಕೀರ್ಣವಿದೆ ಎಂದು ಹೇಳಲಾಗಿದೆ.
“ಕೇಂದ್ರೀಕೃತ ಗುಪ್ತಚರ ಪ್ರಯತ್ನದಲ್ಲಿ, ಐಡಿಎಫ್ ಪಡೆಗಳು ಅಕ್ಟೋಬರ್ 7 ರ ಹತ್ಯಾಕಾಂಡದ ಸಮಯದಲ್ಲಿ ಅಪಹರಣಕ್ಕೊಳಗಾದ 5 ಒತ್ತೆಯಾಳುಗಳ ಶವಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡು ಇಸ್ರೇಲ್ ಗೆ ಮರಳಿ ತಂದವು” ಎಂದು ಐಡಿಎಫ್ ವೀಡಿಯೊಗೆ ಶೀರ್ಷಿಕೆ ನೀಡಿದೆ,. ಮೃತ ಒತ್ತೆಯಾಳುಗಳನ್ನು ಡಬ್ಲ್ಯುಒ ಜಿವ್ ದಾಡೋ, ಎಸ್ಜಿಟಿ ರಾನ್ ಶೆರ್ಮನ್, ಸಿಪಿಎಲ್ ನಿಕ್ ಬೀಜರ್, ಈಡನ್ ಝಕಾರಿಯಾ ಮತ್ತು ಎಲಿಯಾ ಟೊಲೆಡಾನೊ ಎಂದು ಗುರುತಿಸಲಾಗಿದೆ.ಶವವಾಗಿ ಪತ್ತೆಯಾದ ಐದು ಜನರಿಗಾಗಿ ಸೈನಿಕರು ಸುರಂಗದ ಸುತ್ತಲೂ ಪ್ರಾರ್ಥಿಸುತ್ತಿರುವುದನ್ನು ನೋಡಬಹುದಾಗಿದೆ.