ರಾಮನಗರ: ಬೈಕ್ ನಲ್ಲಿ ತೆರಳುವಾಗ ಆಯತಪ್ಪಿ ಕಲ್ಯಾಣಿಗೆ ಬಿದ್ದು ತಾಯಿ-ಮಗಳು ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಗುಂಡಯ್ಯನ ಕಲ್ಯಾಣಿಯಲ್ಲಿ ನಡೆದಿದೆ.
ಮಂಗಳಮ್ಮ(35) ಮತ್ತು ಅವರ ಪುತ್ರಿ ಸನ್ನಿಧಿ(6) ಮೃತಪಟ್ಟವರು ಎಂದು ಹೇಳಲಾಗಿದೆ. ಮೃತರು ಮಾಗಡಿ ಪಟ್ಟಣದ ಕೆಂಪೇಗೌಡ ನಗರದ ನಿವಾಸಿಗಳಾಗಿದ್ದಾರೆ. ಮಾಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.