
ಟ್ವಿಟರ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿಯ ಪುತ್ರಿಗೆ ಅತ್ಯಾಚಾರದ ಬೆದರಿಕೆ ಹಾಕುತ್ತಿರುವ ಆರೋಪಗಳ ಅಡಿಯಲ್ಲಿ ದೆಹಲಿ ಮಹಿಳಾ ಆಯೋಗವು ಪೊಲೀಸರಿಗೆ ನೋಟಿಸ್ ಕಳುಹಿಸಿದೆ. ಚೇರ್ ಪರ್ಸನ್ ಸ್ವಾತಿ ಮಾಲಿವಾಲ್ ಇದೊಂದು ನಾಚಿಕೆಗೇಡಿನ ಸಂಗತಿಯಾಗಿದ್ದು ಕೂಡಲೇ ತಪ್ಪಿತಸ್ಥರನ್ನು ಬಂಧಿಸುವಂತಾಗಬೇಕು ಎಂದು ಹೇಳಿದ್ದಾರೆ ಎಂದು ಆಯೋಗವು ಟ್ವೀಟ್ ಮಾಡಿದೆ.
ಮಹಮ್ಮದ್ ಶಮಿ ಪರ ವಹಿಸಿ ಮಾತನಾಡಿದ ಕಾರಣಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಆಕ್ರೋಶ ಹೊರಹಾಕಿದ್ದ ಕಿಡಿಗೇಡಿ ಸಮೂಹ ಕೊಹ್ಲಿಯ 9 ತಿಂಗಳ ಮಗು ವಮಿಕಾ ಕೊಹ್ಲಿಗೆ ಟ್ವಿಟರ್ನಲ್ಲಿ ಅತ್ಯಾಚಾರದ ಬೆದರಿಕೆಯನ್ನೊಡ್ಡಿತ್ತು.