ತಿರುಪತಿ ಬೆಟ್ಟ ಹತ್ತುವಾಗ ಆಂದ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಕುಸಿದು ಬಿದ್ದಿದ್ದಾರೆ. ಬೆಟ್ಟ ಹತ್ತುವಾಗ ಸುಸ್ತಾಗಿ ಕುಸಿದುಬಿದ್ದು ಅವರು ಅಸ್ವಸ್ಥಗೊಂಡಿದ್ದಾರೆ.
ಅ.1 ರಂದು ಡಿಸಿಎಂ ಪವನ್ ಕಲ್ಯಾಣ್ ಬೆಟ್ಟ ಹತ್ತುವಾಗ ಕುಸಿದು ಬಿದ್ದಿದ್ದು, ವಿಡಿಯೋ ವೈರಲ್ ಆಗಿದೆ. ನಂತರ ಸುಧಾರಿಸಿಕೊಂಡು ಮುನ್ನಡೆದಿದ್ದಾರೆ.
ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿರುಮಲ ವೆಂಕಟೇಶ್ವರ ದೇವಾಲಯದ ಲಡ್ಡೂ ಪ್ರಸಾದದಲ್ಲಿ ‘ಪ್ರಾಣಿಗಳ ಕೊಬ್ಬಿನ’ ಕಲಬೆರಕೆ ಆರೋಪದ ಹಿನ್ನೆಲೆಯಲ್ಲಿ ಪ್ರಾಯಶ್ಚಿತ್ತಕ್ಕಾಗಿ ಮಾಡಲು 11 ದಿನಗಳ ತಪಸ್ಸು ಕೈಗೊಳ್ಳುವುದಾಗಿ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಘೋಷಿಸಿದ್ದರು. 11 ದಿನಗಳ ತಪಸ್ಸು ಕೈಗೊಂಡ ನಂತರ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಲಿದ್ದೇನೆ. ಹನ್ನೊಂದು ದಿನಗಳ ಪ್ರಾಯಶ್ಚಿತ್ತ ದೀಕ್ಷೆಯ ಕೊನೆಯ ಭಾಗದಲ್ಲಿ, ಅಕ್ಟೋಬರ್ 1 ಮತ್ತು 2 ರಂದು, ನಾನು ತಿರುಪತಿಗೆ ಹೋಗಿ ಭಗವಂತನ ವೈಯಕ್ತಿಕ ದರ್ಶನ ಪಡೆದು ಕ್ಷಮೆ ಯಾಚಿಸಿ ನಂತರ ಭಗವಂತನ ಮುಂದೆ ನನ್ನ ಪ್ರಾಯಶ್ಚಿತ್ತ ದೀಕ್ಷೆಯನ್ನು ಪೂರ್ಣಗೊಳಿಸುತ್ತೇನೆ ಎಂದು ತಿಳಿಸಿದ್ದರು.