
ಬೆಳಗಾವಿ: ಸಿ.ಟಿ. ರವಿ ಹೇಳಿಕೆಯಿಂದ ಭಾರತಾಂಬೆಗೆ ಅವಮಾನವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವಾಚ್ಯ ಪದ ಬಳಕೆ ಮಾಡಿದ ಆರೋಪ ಕುರಿತಂತೆ ಮಾಧ್ಯಮ ಪ್ರತಿನಿಧಿಗಳಿಗೆ ಅವರು ಪ್ರತಿಕ್ರಿಯೆ ನೀಡಿದರು.
ಸಿ.ಟಿ. ರವಿ ಹೇಳಿಕೆ ಭಾರತಾಂಬೆಗೆ ಮಾಡಿದ ಅಪಮಾನ. ಮುನಿರತ್ನ ನಾಯ್ಡು ವಿಚಾರದಲ್ಲಿ ಬಿಜೆಪಿ ನಡೆದುಕೊಂಡ ರೀತಿ, ಸದನದಲ್ಲಿ ಇಂದು ಸಿ.ಟಿ. ರವಿ ಹೇಳಿಕೆ ಬಿಜೆಪಿಗೆ ನಾಚಿಕೆಗೇಡು. ಭಾರತ್ ಮಾತಾ ಕೀ ಜೈ ಎನ್ನುತ್ತಾರೆ, ನಾರಿ ಶಕ್ತಿ ಎಂದು ಹೇಳುತ್ತಾರೆ. ಸಿಟಿ ರವಿ ಹೇಳಿಕೆಯಿಂದ ಭಾರತಾಂಬೆಗೆ ಅವಮಾನವಾಗಿದೆ ಎಂದು ಡಿಸಿಎಂ ಹೇಳಿದ್ದಾರೆ.