alex Certify ಬೆಂಗಳೂರಿನಲ್ಲಿ ಮಳೆ ಹಾನಿ ನಿಯಂತ್ರಿಸಲು ಅಧಿಕಾರಿಗಳಿಗೆ DCM ಡಿಕೆ ಶಿವಕುಮಾರ್ ಖಡಕ್ ಸೂಚನೆ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಿನಲ್ಲಿ ಮಳೆ ಹಾನಿ ನಿಯಂತ್ರಿಸಲು ಅಧಿಕಾರಿಗಳಿಗೆ DCM ಡಿಕೆ ಶಿವಕುಮಾರ್ ಖಡಕ್ ಸೂಚನೆ.!

ಬೆಂಗಳೂರು : ಅತಿವೃಷ್ಟಿಯಿಂದಾಗಿ ಬೆಂಗಳೂರಿನ ಹಲವೆಡೆ ಉಂಟಾಗಿರುವ ಹಾನಿ ಕುರಿತಂತೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದರು. ಹಾಗೂ ಅಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದರು.

ಬೆಂಗಳೂರಿನಲ್ಲಿ ಸುರಿದ ಮಳೆಯಿಂದ ಹಲವು ಪ್ರದೇಶಗಳು ಹಾನಿಗೊಂಡಿದ್ದು, ಜನರ ನೆರವಿಗಾಗಿ ನಮ್ಮ ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಮಳೆಯನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಬೆಂಗಳೂರಿನ ಇತಿಹಾಸದಲ್ಲಿ ಈ ಪ್ರಮಾಣದ ಮಳೆಯಾಗಿಲ್ಲ. ನಗರದ ಕೆಲವು ಭಾಗಗಳೂ ಸೇರಿದಂತೆ ಹಲವೆಡೆ ಅಕ್ಟೋಬರ್ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಸದ್ಯ ಮಳೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಮಳೆ ಹಾನಿ ನಿಯಂತ್ರಿಸಲು ನೀಡಿರುವ ಸೂಚನೆಗಳು 

*ವಲಯವಾರು ಅಧಿಕಾರಿಗಳು ಎಲ್ಲೆಲ್ಲಿ ಮಳೆಯಿಂದ ಹಾನಿಯಾಗಲಿದೆ ಹಾಗೂ ಇದರ ಪರಿಹಾರಕ್ಕೆ ತಗಲುವ ಬಜೆಟ್ ಎಷ್ಟು ಎಂಬುದನ್ನು ಪಟ್ಟಿ ಮಾಡಿ ಒಂದು ವಾರದೊಳಗೆ ತಿಳಿಸಬೇಕು.

*ಎಲ್ಲಾ ಕೆರೆಗಳನ್ನು ಲಿಂಕ್ ಮಾಡಲು ಒಂದು “ಮಾಸ್ಟರ್ ಪ್ಲಾನ್” ತಯಾರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

*ಮಳೆ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಕ್ರಮಕೈಗೊಳ್ಳವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
*ಮಳೆ ನೀರು ಹರಿದು ಹೋಗಲು ಎಲ್ಲೆಲ್ಲಿ ಗೇಟ್ ಅಳವಡಿಸಲು ಸಾಧ್ಯವೋ ಅಲ್ಲಿ ಗೇಟ್ ಅಳವಡಿಕೆ ಮಾಡಬೇಕು. ಇದಲ್ಲದೆ ಮಳೆ ನೀರು ಕೆರೆಗಳನ್ನು ಸೇರುವಂತಹ ಯಾವುದಾದರು ಹೊಸ ಯೋಜನೆಯನ್ನು ರೂಪಿಸಬೇಕು.

* ಮಳೆ ನೀರನ್ನು ನಿಯಂತ್ರಿಸಲು ಬಿಬಿಎಂಪಿ, ಬಿಡಿಎ ಹಾಗೂ ಕೆರೆ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ನೀಡುವ ತಾಂತ್ರಿಕ ಸಲಹೆಗಳನ್ನು ಕಾರ್ಯರೂಪಕ್ಕೆ ತರಬೇಕು.

*ರಾಜಕಾಲುವೆಗಳ ಪಕ್ಕದ 50 ಅಡಿ ಜಾಗದಲ್ಲಿ ಯಾರೂ ಕೂಡ ಕಟ್ಟಡಗಳನ್ನು ಕಟ್ಟದಂತೆ ಕ್ರಮವಹಿಸಲು ಸ್ಥಳಗಳನ್ನು ಗುರುತಿಸಿದ್ದು. ಅಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡುತ್ತೇವೆ. ಈ ಕುರಿತು ಆದೇಶಗಳನ್ನು ಹೊರಡಿಸಿ ಜಾಗದ ಮಾಲೀಕರಿಗೆ ಟಿವಿಆರ್ ನೀಡುತ್ತೇವೆ.

*ಬೆಂಗಳೂರಿನಲ್ಲಿರುವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಆದೇಶ ನೀಡಲಾಗಿದೆ.

*ತುರ್ತು ಸಂದರ್ಭಗಳಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ಅಧಿಕಾರವಿದ್ದು, ಅದರಂತೆ ಮಳೆ ಹಾನಿ ನಿಯಂತ್ರಣಕ್ಕೆ ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳುವುದು ಎಂದು ಸೂಚನೆ ನೀಡಿದರು.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...