
ಬೆಂಗಳೂರು: ಇಶಾ ಫೌಂಡೇಷನ್ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭಾಗಿಯಾಗುವುದಕ್ಕೆ ಪಕ್ಷದಲ್ಲಿಯೇ ಆಕ್ಷೇಪ ವ್ಯಕ್ತವಾಗಿದೆ.
ಜಾತ್ಯತೀತ ಪಕ್ಷದ ಅಧ್ಯಕ್ಷರಾಗಿ, ಜಾತ್ಯತೀತ ಸರ್ಕಾರದ ಉಪಮುಖ್ಯಮಂತ್ರಿಯಾಗಿ ನಮ್ಮ ನಾಯಕ ರಾಹುಲ್ ಗಾಂಧಿಯವರನ್ನು ಅಪಹಾಸ್ಯ ಮಾಡುವವರಿಗೆ ಸಾರ್ವಜನಿಕವಾಗಿ ಧನ್ಯವಾದ, ಕೃತಜ್ಞತೆ ವ್ಯಕ್ತಪಡಿಸುವುದು ಸರಿಯೇ ಎಂದು ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್ ಪ್ರಶ್ನಿಸಿದ್ದಾರೆ.
ದೇಶದ ಭರವಸೆಯಾದ ರಾಹುಲ್ ಗಾಂಧಿ ಅವರನ್ನು ಅಪಹಾಸ್ಯ ಮಾಡುವ ಮತ್ತು ಆರೆಸ್ಸೆಸ್‌ನ ನಿರೂಪಣೆಗಳೊಂದಿಗೆ ಹೊಂದಿಕೆಯಾಗುವ ವ್ಯಕ್ತಿಯ ಆಹ್ವಾನಕ್ಕಾಗಿ ಧನ್ಯವಾದ ಹೇಳುವುದು, ಜಾತ್ಯತೀತ ಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸುವಾಗ ಪಕ್ಷದ ಕಾರ್ಯಕರ್ತರನ್ನು ದಾರಿ ತಪ್ಪಿಸುತ್ತದೆ. ರಾಜಿ ಮಾಡಿಕೊಳ್ಳುವ ಬದಲು ಮನವರಿಕೆ ಮಾಡಿಕೊಳ್ಳುವುದು ಪಕ್ಷದ ಬೆಳವಣಿಗೆಯನ್ನು ಖಚಿತಪಡಿಸುತ್ತದೆ. ಇಲ್ಲದಿದ್ದರೆ, ಅದು ಮೂಲವನ್ನು ಹಾನಿಗೊಳಿಸುತ್ತದೆ ಎಂದಿದ್ದಾರೆ.
ಡಿಸಿಎಂ ಪಕ್ಷದ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನಿಸಿದ್ದಾರೆ. ಬದ್ಧತೆ ಅಂದರೆ ರಾಜಿ ಅಲ್ಲ ಎಂದು ಪಿ.ವಿ. ಮೋಹನ್ ಪೋಸ್ಟ್ ಹಾಕಿದ್ದು, ಪಕ್ಷದ ಪ್ರಗತಿ ಮತ್ತು ಬೆಳವಣಿಗೆಗೆ ಇದು ಮಾರಕವೆಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Thanking for an invitation from someone who mocks RG, the hope of the nation&aligns with RSS’s narratives,while serving as a president of a secular party, it misleads party workers. It is Conviction rather than compromise ensures the party’s growth. Otherwise, it damages the core pic.twitter.com/x9hnxhbfF6
— PV.MOHAN (@pvmohanINC) February 26, 2025