
ಬೆಂಗಳೂರು: ರೈತರು ನೀರು ಬಳಕೆದಾರರ ಸಂಘಗಳನ್ನು ಸಕ್ರಿಯಗೊಳಿಸಬೇಕು. ಈ ಸಂಘಗಳ ನಿರ್ವಹಣೆಗೆ ಎರಡು ಲಕ್ಷಕ್ಕಿಂತ ಹೆಚ್ಚು ಅನುದಾನ ನೀಡಲು ಉದ್ದೇಶಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ
ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಮಧು ಜಿ. ಮಾದೇಗೌಡ ಅವರ ಪ್ರಶ್ನೆಗೆ ಉತ್ತರ ನೀಡಿದ ಡಿಸಿಎಂ, ನೀರು ಬಳಕೆದಾರರ ಸಂಘಗಳನ್ನು ಸಕ್ರಿಯಗೊಳಿಸಬೇಕು. ಇವುಗಳ ನಿರ್ವಹಣೆಗೆ ಎರಡು ಲಕ್ಷಕ್ಕಿಂತ ಹೆಚ್ಚು ಅನುದಾನ ನೀಡಲು ಉದ್ದೇಶಿಸಲಾಗಿದೆ. ಕಾಡಾ ಮುಖಾಂತರ ಸಂಘಗಳನ್ನು ಮುನ್ನಡೆಸಲು ಚಿಂತಿಸಲಾಗಿದೆ. ಇವುಗಳಿಗೆ ಬಜೆಟ್ ನಲ್ಲೂ ಹಣ ಕಾಯ್ದಿರಿಸಲಾಗುವುದು ಎಂದು ಹೇಳಿದ್ದಾರೆ.
ಕಾಲುವೆಗಳ ಕೊನೆಯ ಭಾಗದ ರೈತರಿಗೆ ನೀರು ತಲುಪಿಸಲು ಕಾರಣಾಂತರದಿಂದ ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.