ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಶೂ ಕಳ್ಳತನವಾಗಿರುವ ಘಟನೆ ಬೆಂಗಳೂರಿನ ಸದಾಶಿವನಗರದ ಭಾಷ್ಯಂ ಸರ್ಕಲ್ ನಲ್ಲಿ ನಡೆದಿದೆ.
ವೈಟ್ ಟ್ಯಾಪಿಂಗ್ ರಸ್ತೆ ಕಾಮಗಾರಿ ಪೂಜೆಗೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆಗಮಿಸಿದ್ದರು. ಈ ವೇಳೆ ಶೂ ತೆಗೆದಿಟ್ಟು ವೈಟ್ ಟ್ಯಾಪಿಂಗ್ ರಸ್ತೆ ಕಾಮಗಾರಿ ಪೂಜೆ ನೆರವೇರಿಸಿದ್ದಾರೆ. ಈ ವೇಳೆ ಬಿಜೆಪಿ ಶಾಸಕ ಅಶ್ವತ್ಥ ನಾರಾಯಣ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.
ಪೂಜೆ ಮುಗಿದ ಬಳಿಕ ಹೊರಡಲು ಸಿದ್ಧರಾದ ಡಿಸಿಎಂ ಡಿ.ಕೆ.ಶಿವಕುಮಾರ್, ಶೂ ಹಾಕಿಕೊಳ್ಳಲೆಂದು ಬಂದರೆ ಶೂ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಇಟ್ಟ ಜಾಗದಲ್ಲಿ ಶೂ ಇಲ್ಲ. ಎಷ್ಟು ಹುಡುಕಾಡಿದರೂ ಶೂ ಸಿಗದ ಕಾರಣ ಡಿ.ಕೆ.ಶಿವಕುಮಾರ್ ತಮ್ಮ ಕಾರಿನಲ್ಲಿದ್ದ ಮತ್ತೊಂದು ಶೂ ಧರಿಸಿ ಪ್ರಯಾಣ ಮುಂದುವರೆಸಿದರು.