ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಲಸಿಕೆ ನೀಡಿಕೆ ಕಾರ್ಯ ವೇಗವಾಗಿ ನಡೆದಿದೆ. ಈಗಾಗಲೇ ದೇಶದಲ್ಲಿ ಕೋವಿಶೀಲ್ಡ್, ಕೊವ್ಯಾಕ್ಸಿನ್, ಸ್ಪುಟ್ನಿಕ್ ವಿ ನೀಡಲಾಗುತ್ತಿದೆ. ಈಗ ಮಾಡೆರ್ನಾ ಲಸಿಕೆಯ ತುರ್ತು ಬಳಕೆಗೆ ಕೂಡ ಅನುಮತಿ ನೀಡಲಾಗಿದೆ.
ಮಾಡೆರ್ನಾ ಕಂಪನಿಯ ಕೋವಿಡ್ ಲಸಿಕೆಯನ್ನು ಆಮದು ಮಾಡಿಕೊಳ್ಳಲು ಸಿಪ್ಲಾ ಕಂಪನಿಗೆ ಭಾರತೀಯ ಔಷಧ ನಿಯಂತ್ರಣಾ ಪ್ರಾಧಿಕಾರದಿಂದ ಅನುಮತಿ ನೀಡಲಾಗಿದೆ. ಅಮೆರಿಕದ ಮಾಡೆರ್ನಾ ಲಸಿಕೆ ಆಮದು ಮಾಡಿಕೊಳ್ಳುವ ಕುರಿತು ಕಂಪನಿ ಅನುಮತಿ ಕೋರಿತ್ತು. ಲಸಿಕೆಯ ತುರ್ತು ಬಳಕೆಗಾಗಿ ಆಮದು ಮಾಡಿಕೊಳ್ಳಲು ಡಿಸಿಜಿಐ ಅನುಮತಿ ನೀಡಿದೆ. ಇದು ದೇಶಕ್ಕೆ ದೊರೆತ 4 ನೇ ಕೊರೋನಾ ಲಸಿಕೆಯಾಗಿದೆ.