ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಡಿಸಿಇಟಿ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಿದ್ದು, ಮೊದಲ ಸುತ್ತಿನಲ್ಲಿ ಇಂಜಿನಿಯರಿಂಗ್ ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಇಚ್ಛೆ ದಾಖಲಿಸಲು ಆಗಸ್ಟ್ 8ರವರೆಗೆ ಅವಕಾಶ ಕಲ್ಪಿಸಿದೆ.
ಮಳೆಯ ಕಾರಣಕ್ಕೆ ಶುಲ್ಕ ಪಾವತಿ ಮತ್ತಿತರ ಸಮಸ್ಯೆಗಳು ಎದುರಾಗಿವೆ ಎಂದು ಅಭ್ಯರ್ಥಿಗಳು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ದಿನಾಂಕ ವಿಸ್ತರಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಇಚ್ಛೆ ದಾಖಲಿಸಲು ಮತ್ತಷ್ಟು ದಿನ ಅವಕಾಶ ನೀಡಲಾಗುವುದು. ಸದ್ಯದಲ್ಲಿಯೇ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಮೊದಲು ಸುತ್ತಿನಲ್ಲಿ ಚಾಯ್ಸ್ -1 ಮತ್ತು 2 ಆಯ್ಕೆ ಮಾಡಿಕೊಂಡವರು ಆಗಸ್ಟ್ 8ರೊಳಗೆ ಚಲನ್ ಡೌನ್ಲೋಡ್ ಮಾಡಿಕೊಳ್ಳಬೇಕು. ಶುಲ್ಕ ಪಾವತಿಸಲು ಆಗಸ್ಟ್ 9ರ ವರೆಗೆ ಅವಕಾಶವಿದೆ. ಆಗಸ್ಟ್ 10ರೊಳಗೆ ಕಾಲೇಜಿಗೆ ವರದಿ ಮಾಡಬೇಕು ಎಂದು ಹೇಳಲಾಗಿದೆ.
ಡಿಸಿಇಟಿ 2024ಕ್ಕೆ ಅರ್ಜಿ ಸಲ್ಲಿಸಿ ದಾಖಲಾತಿ ಪ್ರಕ್ರಿಯೆ ಪೂರ್ಣಗೊಳಿಸಿರುವ ಆರ್ಕಿಟೆಕ್ಚರ್ ಅಭ್ಯರ್ಥಿಗಳು ನಾಟಾ ಅಂಕಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸದಿದ್ದಲ್ಲಿ ಆಗಸ್ಟ್ 8ರಂದು ಖುದ್ದು ಪ್ರಾಧಿಕಾರಕ್ಕೆ ಬಂದು ಸಲ್ಲಿಸಿ ರ್ಯಾಂಕ್ ಪಡೆಯಬಹುದು. ನಂತರ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂದು ಹೇಳಲಾಗಿದೆ.