ಬೆಂಗಳೂರು: ಡಿಸೆಂಬರ್ 10 ರಂದು ವಿಧಾನ ಪರಿಷತ್ ನ 25 ಸ್ಥಾನಗಳಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬೆಳಗಾವಿ ಮತ್ತು ಚಾಮರಾಜನಗರ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಬೆಳಗಾವಿ ಜಿಲ್ಲಾಧಿಕಾರಿಯಾಗಿ ಆರ್. ವೆಂಕಟೇಶ ಕುಮಾರ್, ಚಾಮರಾಜನಗರ ಜಿಲ್ಲಾಧಿಕಾರಿಯಾಗಿ ಚಾರುಲತಾ ಸೋಮಲ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಬೆಳಗಾವಿ ಡಿಸಿಯಾಗಿದ್ದ ಎಂ.ಜಿ. ಹಿರೇಮಠ ಹಾಗೂ ಚಾಮರಾಜನಗರ ಡಿಸಿ ಆಗಿದ್ದ ಡಾ. ರವಿ ಅವರಿಗೆ ಸ್ಥಾನ ತೋರಿಸಿಲ್ಲವೆನ್ನಲಾಗಿದೆ.