
ದೆಹಲಿಯ ಲಹೋರಿ ಗೇಟ್ ಬಳಿ ಹಗಲು ಹೊತ್ತಲ್ಲೇ ಒಬ್ಬ ವ್ಯಾಪಾರಿ ಬಳಿ 80 ಲಕ್ಷ ರೂಪಾಯಿ ದೋಚಲಾಗಿದೆ. ಈ ಘಟನೆ ಚಾಂದಿನಿ ಚೌಕ್‌ನಲ್ಲಿರುವ ಹವೇಲಿ ಹೈದರ್ ಕುಲಿ ಎಂಬಲ್ಲಿ ನಡೆದಿದೆ. ಈ ದರೋಡೆಯ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವ್ಯಾಪಾರಿಯೊಬ್ಬರು ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಒಬ್ಬ ಕಳ್ಳ ಗನ್ ತೋರಿಸಿ 80 ಲಕ್ಷ ರೂಪಾಯಿ ಇದ್ದ ಬ್ಯಾಗ್ ಕಿತ್ಕೊಂಡು ಓಡಿಹೋಗಿದ್ದಾನೆ. ಸುತ್ತಮುತ್ತಲ ಜನ ನೋಡುತ್ತಿದ್ದರೂ ಯಾರೂ ಸಹಾಯ ಮಾಡಲು ಮುಂದೆ ಬರಲಿಲ್ಲ. ಈ ವ್ಯಾಪಾರಿ ಹವಾಲಾ ವ್ಯಾಪಾರ ಮಾಡುತ್ತಿದ್ದರು ಎನ್ನಲಾಗಿದೆ. ಈ ಘಟನೆಯಿಂದ ಅಂಗಡಿಯವರು ಭಯಭೀತರಾಗಿದ್ದಾರೆ.
ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕಳ್ಳನನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಈಶಾನ್ಯ ದೆಹಲಿಯ ನ್ಯೂ ಸೀಲಾಮ್‌ಪುರ್ ಮಾರುಕಟ್ಟೆಯಲ್ಲಿ ಮೂವರು ಕಳ್ಳರು ಒಂದು ಅಂಗಡಿಗೆ ನುಗ್ಗಿ ಗನ್ ತೋರಿಸಿ 12,000 ರೂಪಾಯಿ ದೋಚಿದ್ದರು. ಆ ಘಟನೆಯೂ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಆ ಸಮಯದಲ್ಲಿ ಹತ್ತಿರದ ಹೋಟೆಲ್ ಮಾಲೀಕ ಸಹಾಯ ಮಾಡಲು ಹೋದಾಗ ಕಳ್ಳನೊಬ್ಬ ಅವನ ತಲೆಗೆ ಗನ್‌ನಿಂದ ಹೊಡೆದಿದ್ದ.
दिल्ली में दिनदहाड़े 80 लाख की लूट हुई
◆ लाहौरी गेट में बंदूक की नोक पर व्यापारी से की गई लूट #LahoriGate | #Delhi | Delhi | Lahori Gate pic.twitter.com/izfnUrF31e
— News24 (@news24tvchannel) March 18, 2025