ಲಂಡನ್: ಮೃತದೇಹಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ವಿಕೃತಕಾಮಿಗೆ ಲಂಡನ್ ಕೋರ್ಟ್ ಶಿಕ್ಷೆ ವಿಧಿಸಿದೆ. ಹೀತ್ ಫೀಲ್ಡ್ ನಿವಾಸಿಯಾಗಿರುವ 67 ವರ್ಷದ ಡೇವಿಡ್ ಪುಲ್ಲರ್ ಶಿಕ್ಷೆಗೆ ಒಳಗಾದ ವ್ಯಕ್ತಿಯಾಗಿದ್ದಾನೆ.
ಡೇವಿಡ್ ಫುಲ್ಲರ್ 1989 ರಲ್ಲಿ ಸಸೆಕ್ಸ್ ಆಸ್ಪತ್ರೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ವೇಳೆ ಆಸ್ಪತ್ರೆಯ ಶವಾಗಾರದಲ್ಲಿ ಹೆಣ್ಣುಮಕ್ಕಳ ಮೃತದೇಹಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ. ಇಬ್ಬರು ಮಹಿಳೆಯರನ್ನು ಕೊಲೆ ಮಾಡಿ ನೂರಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳ ಮೃತದೇಹದ ಮೇಲೆ ಅತ್ಯಾಚಾರ ಎಸಗಿದ್ದ ಹಿನ್ನೆಲೆಯಲ್ಲಿ ಆತನಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಮೃತದೇಹಗಳು ಸಿಗದಿದ್ದ ಸಂದರ್ಭದಲ್ಲಿ ಇಬ್ಬರು ಯುವತಿಯರನ್ನು ಕೊಲೆ ಮಾಡಿ ಅತ್ಯಾಚಾರ ಎಸಗಿದ್ದ ಈತನ ವಿರುದ್ಧ ಪೊಲೀಸರು ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ಕೋರ್ಟ್ ಶಿಕ್ಷೆ ವಿಧಿಸಿದೆ.
ಕಳೆದ ವರ್ಷ ಕೆಂಟ್‌ನ ಸೇತುವೆಯಿಂದ ಬಿದ್ದು ಸಾವನ್ನಪ್ಪಿದ 24 ವರ್ಷದ ಅಜ್ರಾ ಕೆಮಾಲ್ ಅವರನ್ನು ಟನ್‌ಬ್ರಿಡ್ಜ್ ವೆಲ್ಸ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿತ್ತು. ಅಲ್ಲಿ ಮೃತದೇಹದ ಮೇಲೆ ಫುಲ್ಲರ್ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ ಎಂದು ಮೃತಳ ತಾಯಿ ಆರೋಪಿಸಿದ್ದಾರೆ.
ಕೊಲೆಗಾರ ಡೇವಿಡ್ ಫುಲ್ಲರ್ ಈಗ ಮುಚ್ಚಿದ ಕೆಂಟ್ ಮತ್ತು ಸಸೆಕ್ಸ್ ಆಸ್ಪತ್ರೆ ಮತ್ತು ಟನ್‌ಬ್ರಿಡ್ಜ್ ವೆಲ್ಸ್ ಆಸ್ಪತ್ರೆಯೊಳಗಿನ ಶವಾಗಾರಗಳಲ್ಲಿ ಮೃತ ದೇಹಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ವೆಂಡಿ ಕ್ನೆಲ್ ಮತ್ತು ಕ್ಯಾರೊಲಿನ್ ಪಿಯರ್ಸ್ ಅವರ ಕೊಲೆ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ.