
ದಾವಣಗೆರೆ: ಫುಟ್ ಪಾತ್‌ನಲ್ಲಿ ವ್ಯಾಪಾರ ನಿಷಿದ್ದವಾಗಿದ್ದು, ವ್ಯಾಪಾರ ಮಾಡುವವರ ಸಾಮಗ್ರಿ ಜಪ್ತಿಗೆ ಸೂಚನೆ ನೀಡಲಾಗಿದೆ.
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡುವ ಬೀದಿಬದಿ ವ್ಯಾಪಾರಿಗಳು ಮತ್ತು ಈ ಹಿಂದೆ ಪಾಲಿಕೆಯಿಂದ ನೋಂದಾಯಿಸಲ್ಪಟ್ಟ, ನೋಂದಣಿ ಮಾಡಿಸದೇ ಇರುವ ಬೀದಿಬದಿ ವ್ಯಾಪಾರಿಗಳು ನಗರದ ರಸ್ತೆ ಬದಿಗಳಲ್ಲಿ ಪಾದಚಾರಿ ರಸ್ತೆಗಳಲ್ಲಿ ತರಕಾರಿ, ಹಣ್ಣು ಹಂಪಲು, ಹೂವು ಹಾಗೂ ಪೂಜಾ ಸಾಮಗ್ರಿಗಳ ವ್ಯಾಪಾರ ಮಾಡಲು ತಾವು ಬಳಸುವ ತಳ್ಳುವ ಗಾಡಿ, ಪೆಟ್ಟಿಗೆಗಳನ್ನು ವ್ಯಾಪಾರದ ಸ್ಥಳದಲ್ಲಿಯೇ ಶಾಶ್ವತವಾಗಿ ಇಡುತ್ತಿದ್ದಾರೆ.
ಇದರಿಂದ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ತಳ್ಳುವ ಗಾಡಿಗಳು, ಮಾರಾಟ ಸಾಮಗ್ರಿಗಳು ಸಾರ್ವಜನಿಕ ರಸ್ತೆ, ಫುಟ್ ಪಾತ್ ಮೇಲೆ ಕಂಡುಬಂದಲ್ಲಿ ಅವುಗಳನ್ನು ಜಪ್ತಿ ಮಾಡುವ ಜೊತೆಗೆ ದಂಡ ವಿಧಿಸಲಾಗುವುದು ಎಂದು ಮಹಾನಗರಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.