ದಾವಣಗೆರೆ: ಉದ್ಯೋಗ ಆರಸಿ ಮಧ್ಯ ಆಫ್ರಿಕಾಗೆ ತೆರಳಿದ್ದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹಕ್ಕಿ-ಪಿಕ್ಕಿ ಜನಂಗದ 25 ನಾಟಿ ವೈದ್ಯರು ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಮಧ್ಯ ಆಫ್ರಿಕಾದ ಗಬಾನ್ ದೇಶಕ್ಕೆ ತೆರಳಿದ್ದ 25 ನಾಟಿ ವೈದ್ಯರು ಬಂಧನಕ್ಕೀದಾಗಿದ್ದಾರೆ ಎಂದು ತಿಳಿದುಬಂದಿದೆ. ಚನ್ನಗಿರಿ ತಾಲೂಕಿನ ಗೋಪನಾಳ್- ಅಸ್ತಾಪನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ 25 ನಟಿ ವೈದ್ಯರು ಗಬಾನ್ ಗೆ ತೆರಳಿದ್ದರು. ಅಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಹೊಸ ಸರ್ಕಾರ ಅಧಿಕರಕ್ಕೆ ಬಂದಿದ್ದು, ನೂತನ ಸರ್ಕಾರ ವಿದೇಶಿಯರು ದೇಶ ಬಿಡುವಂತೆ ತಾಕೀತು ಮಾಡಿದೆ.
ಈ ಹಿನ್ನೆಲೆಯಲ್ಲಿ ಗಬಾನ್ ರಾಜಧನೈ ಲಿಬ್ರೆವಿಲ್ ನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಲಿಬ್ರೆವಿಲ್ ನಲ್ಲಿ ವಾಸವಾಗಿದ್ದ ರಾಜ್ಯ 25 ನಾಟಿ ವೈದ್ಯರು ಸೇರಿ ಹಲವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಪಾಸ್ ಪೋರ್ಟ್ ಗಳನ್ನು ವಶಕ್ಕೆ ಪಡೆದು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಲಿಬ್ರೆವಿಲ್ ನಲ್ಲಿನ ವೈದ್ಯರು ತಮ್ಮ ಕುಟುಂಬಕ್ಕೆ ಕರೆ ಮಾಡಿ ಅಳಲು ತೋಡಿಕೊಂಡಿದ್ದಾರೆ.
ಸಂಕಷ್ಟಕ್ಕೆ ಸಿಲುಕಿರ ರಾಜ್ಯದ ವೈದ್ಯರನ್ನು ಕರೆತರಲು ಸಿಎಂ ಸಿದ್ದರಾಮಯ್ಯ ಹಾಗೂ ವಿದೇಶಾಂಗ ಸಚಿವರು ನೆರವಾಗಿವಂತೆ ಕುಟುಂಬದವರು ಮನವಿ ಮಾಡಿದ್ದಾರೆ.