
ದಾವಣಗೆರೆ: ಹಣಕ್ಕಾಗಿ ಸ್ವಂತ ಅಳಿಯನನ್ನೇ ಹತ್ಯೆಗೈದಿದ್ದ ಸೋದರ ಮಾವನನ್ನು ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮನೋಹರ್ (27) ಬಂಧಿತ ಆರೋಪಿ. ಆರೊಪಿ ಮನೋಹರ್, ಮೇ 16ರಂದು ದಾವಣಗೆರೆ ತಾಲೂಕಿನ ಓಬಜ್ಜಿಹಳ್ಳಿಯಲ್ಲಿ ಸುದೀಪ್ (24) ನನ್ನು ಚಾಕುವಿನಿಂದ ಇರುದು ಹತ್ಯೆ ಮಾಡಿದ್ದ. ಮನೋಹರ್, ಕೊಲೆಯಾದ ಸುದೀಪ್ ತಂದೆಯ ತಂಗಿಯ ಮಗ. ಇಬ್ಬರೂ ದಾವಣಗೆರೆಯ ಬೂದಿಹಾಳ್ ರಸ್ತೆಯ ಎಸ್ ಪಿಎಸ್ ನಗರದ ನಿವಾಸಿಗಳು.
ಮನೋಹರ್ ತನ್ನ ಸಹೋದರರಿಬ್ಬರ ಜೊತೆ ಸೇರಿ ಸುದೀಪ್ ನನ್ನು ಕೊಲೆ ಮಾಡಿದ್ದ. ಇದೀಗ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.