ದಾವಣಗೆರೆ: ದಾವಣಗೆರೆ ಕೋವಿಡ್ ಕೇರ್ ಸೆಂಟರ್ ನಿಂದ ಸೋಂಕಿತೆಯರು ಪರಾರಿಯಾಗಿದ್ದಾರೆ. ಜೆ.ಹೆಚ್. ಪಟೇಲ್ ಬಡಾವಣೆಯ ಕೋವಿಡ್ ಕೇರ್ ಸೆಂಟರ್ ನಿಂದ 21 ವರ್ಷ ಮತ್ತು 19 ವರ್ಷದ ಯುವತಿಯರು ಪರಾರಿಯಾಗಿದ್ದಾರೆ.
ಕೇಂದ್ರದ ಭದ್ರತಾ ಸಿಬ್ಬಂದಿ ಊಟಕ್ಕೆ ತೆರಳಿದ್ದ ವೇಳೆಯಲ್ಲಿ ಇಬ್ಬರು ಸೋಂಕಿತೆಯರು ಪರಾರಿಯಾಗಿದ್ದು, ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.