
ಬೆಂಗಳೂರು: ದಾವಣಗೆರೆಯ ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಹಿಂದೂಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು ಆಕಸ್ಮಿಕವೂ ಅಲ್ಲ, ಸಣ್ಣ ಘಟನೆಯೂ ಅಲ್ಲ.
ಇದೊಂದು ಹಿಂದೂಗಳನ್ನು ಹತ್ಯೆ ಮಾಡಲು ನಡೆಸಿದ ವ್ಯವಸ್ಥಿತ ಷಡ್ಯಂತ್ರ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.
ಸಿಎಂ ಸಿದ್ದರಾಮಯ್ಯ ಅವರೆ, ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರೆ, ಹಿಂದೂಗಳನ್ನು ಹತ್ಯೆಗೈಯಲು ಕಾದು ಕುಳಿತಿದ್ದ ಸೈತಾನರಿಗೆ ಶಿಕ್ಷೆ ನೀಡುತ್ತಿರೋ ಅಥವಾ ಅವರಿಗೂ “ಅಮಾಯಕ”ರು ಎಂಬ ಪಟ್ಟ ಕಟ್ಟುತ್ತಿರೋ..!?! ಎಂದು ಬಿಜೆಪಿ ಪ್ರಶ್ನಿಸಿದೆ.