ದಾವಣಗೆರೆ ಜಿಲ್ಲೆ ಚನ್ನಗಿರಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಅರ್ಧಕ್ಕೆ ನಿಂತಿದೆ. ಸಂಸದ ಜಿ.ಎಂ. ಸಿದ್ದೇಶ್ವರ ಅವರ ವಾಹನ ತಡೆಯಲಾಗಿದೆ.
ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಲ್ಲಿಕಾರ್ಜುನ ಅವರಿಗೆ ಯಾತ್ರೆ ವಾಹನದಲ್ಲಿ ಸ್ಥಳ ನೀಡಿದ್ದಕ್ಕೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಶಿವಕುಮಾರ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚನ್ನಗಿರಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಶಿವಕುಮಾರ್, ಮಾಡಾಳ್ ಮಲ್ಲಿಕಾರ್ಜುನ ಬಣಗಳ ನಡುವೆ ಕಿತ್ತಾಟಕ್ಕೆ ವಿಜಯ ಸಂಕಲ್ಪ ಯಾತ್ರೆ ಬಲಿಯಾಗಿದೆ. ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಮಲ್ಲಿಕಾರ್ಜುನ ಪರ ಅವರ ಬೆಂಬಲಿಗರು ಘೋಷಣೆ ಕೂಗಿದ್ದಾರೆ. ಶಿವಕುಮಾರ್ ಪರ ಅವರ ಬೆಂಬಲಿಗರು ಘೋಷಣೆ ಕೂಗಿದ್ದು, ಇಬ್ಬರ ಬ್ಯಾನರ್ ಗಳನ್ನು ಹರಿದು ಹಾಕಲಾಗಿದೆ.
ಹೈಡ್ರಾಮ ಉಂಟಾಗಿದ್ದರಿಂದ ವಿಜಯ ಸಂಕಲ್ಪ ಯಾತ್ರೆಯನ್ನು ಬಿಜೆಪಿ ನಾಯಕರು ಅರ್ಧಕ್ಕೆ ನಿಲ್ಲಿಸಿದ್ದಾರೆ. ಸಂಸದ ಸಿದ್ದೇಶ್ವರ, ಎನ್. ರವಿಕುಮಾರ್, ಎಂ.ಪಿ. ರೇಣುಕಾಚಾರ್ಯ ವಿಜಯ ಸಂಕಲ್ಪ ಯಾತ್ರೆ ವಾಹನದಿಂದ ಇಳಿದು ಹೋಗಿದ್ದಾರೆ. ಉಭಯ ಬಣಗಳ ಬಿಜೆಪಿ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸಿದ್ದಾರೆ.