ದಾವಣಗೆರೆ: ಭದ್ರಾ ನಾಲೆಗಳಿಗೆ ನೀರು ಹರಿಸಬೇಕೆಂದು ಒತ್ತಾಯಿಸಿ ಇಂದು ದಾವಣಗೆರೆ ಬಂದ್ ಗೆ ಕರೆ ನೀಡಲಾಗಿದೆ.
100 ದಿನದ ಬದಲು 40 ದಿನ ನೀರು ಹರಿಸುವುದಕ್ಕೆ ದಾವಣಗೆರೆ ಭಾಗದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 1.25 ಲಕ್ಷ ಎಕರೆಯಲ್ಲಿ ಬೆಳೆದ ಭತ್ತ ನಾಶದ ಆತಂಕದಲ್ಲಿ ರೈತರಿದ್ದಾರೆ. ನಾಲೆಗೆ ನೀರು ಬಿಡದಿರುವ ನಿರ್ಧಾರ ಖಂಡಿಸಿ ಸೋಮವಾರ ಜಿಲ್ಲಾ ಬಂದ್ ಗೆ ಕರೆ ನೀಡಿದ್ದಾರೆ.
ಭದ್ರಾ ಜಲಾಶಯದಿಂದ ನಾಲೆಗಳಿಗೆ 100 ದಿನ ನೀರು ಬಿಡಬೇಕಿದೆ. ಆದರೆ, ಭದ್ರಾ ಕಾಡಾ ಸಮಿತಿ 40 ದಿನಕ್ಕೆ ನೀರು ಬಂದ್ ಮಾಡಿ ರೈತರಿಗೆ ಸಂಕಷ್ಟ ತಂದಿದೆ. 1.25 ಲಕ್ಷ ಎಕರೆಯಲ್ಲಿನ ಭತ್ತ ಒಣಗುವ ಆತಂಕ ಎದುರಾಗಿದೆ. ಹೀಗಾಗಿ ಬಂದ್ ಗೆ ಕರೆ ನೀಡಲಾಗಿದೆ.