
ದಾವಣಗೆರೆ: ಹೊಸ ವರ್ಷಾಚರಣೆಗೆಂದು ಗೋವಾ ಪ್ರವಾಸಕ್ಕೆ ಹೋಗಿ ವಾಪಾಸ್ ಆಗುತ್ತಿದ್ದಾಗ ದುರಂತ ಸಂಭವಿಸಿದ್ದು, ಭೀಕರ ಅಪಘಾತದಲ್ಲಿ ಓರ್ವ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ದೇವಿಕೆರೆ ಬಳಿ ಸಂಭವಿಸಿದೆ.
ವೇಗವಾಗಿ ಬಂದ ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದು, ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾ ಸ್ಪತ್ರೆಗೆ ದಾಖಲಿಸಲಾಗಿದೆ.
ಗೋವಾ ಪ್ರವಾಸದಿಂದ ವಾಪಾಸ್ ಆಗುತ್ತಿದ್ದಾಗ ಜಗಳೂರು ತಾಲೂಕಿನ ದೇವಿಕೆರೆ ಬಳಿ ಈ ಅಪಘಾತ ಸಂಭವಿಸಿದೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.