alex Certify ನಿಮಗೆ ನೆನಪಿದೆಯಾ ಈ ಫೋಟೋ….? ಕಡುಕಷ್ಟದಲ್ಲೂ ಈ ಬಡ ವಿದ್ಯಾರ್ಥಿನಿ ಮಾಡಿದ್ದಾಳೆ ಸಾಧನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮಗೆ ನೆನಪಿದೆಯಾ ಈ ಫೋಟೋ….? ಕಡುಕಷ್ಟದಲ್ಲೂ ಈ ಬಡ ವಿದ್ಯಾರ್ಥಿನಿ ಮಾಡಿದ್ದಾಳೆ ಸಾಧನೆ

ಓಡಿಶಾದ ಕಲಹಂಡಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಶವ ಸಾಗಿಸಲು ನಿರಾಕರಿಸಿದ ನಂತರ ತಾಯಿಯ ಶವವನ್ನ ಹೆಗಲ ಮೇಲೆ ಹೊತ್ತು ಸಾಗುತ್ತಿದ್ದ ತಂದೆಯ ಜೊತೆ 10 ಕಿಲೋಮೀಟರ್​ ದೂರ ಕಾಲ್ನಡಿಗೆಯಲ್ಲೇ ಸಾಗಿದ್ದ ಚಾಂದನಿ ಮಾಂಜಿ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಾಳೆ.

ಶುಕ್ರವಾರ 10ನೇ ತರಗತಿ ಬೋರ್ಡ್ ಎಕ್ಸಾಂನ ಫಲಿತಾಂಶ ಪ್ರಕಟಿಸಲಾಗಿದ್ದು ಇದರಲ್ಲಿ ಚಾಂದಿನಿ ಉತ್ತೀರ್ಣಳಾಗಿದ್ದಾಳೆ. ಒಟ್ಟು 2,81,658 ಮಂದಿ ವಿದ್ಯಾರ್ಥಿನಿಯರು ಈ ಪರೀಕ್ಷೆಯನ್ನ ಪಾಸ್​ ಮಾಡಿದ್ದಾರೆ.

ಪರೀಕ್ಷೆ ಬರೆದವರಿಗೆ ತಮ್ಮ ಹಣೆಬರಹ ಗೊತ್ತಿರುತ್ತೆ: ಯೋಗೇಶ್ವರ್ ಗೆ ರೇಣುಕಾಚಾರ್ಯ ತಿರುಗೇಟು

ಭುವನೇಶ್ವರ ಮೂಲದ ಕಳಿಂಗ್​ ಇನ್​ಸ್ಟಿಟ್ಯೂಟ್​ ಆಫ್​ ಸೋಶಿಯಲ್​ ಸೈನ್ಸ್​​ ನಡೆಸುತ್ತಿರುವ ಬುಡಕಟ್ಟು ಶಾಲೆಯ ವಿದ್ಯಾರ್ಥಿನಿ ಚಾಂದನಿ 600 ಅಂಕಗಳಲ್ಲಿ 280 ಅಂಕಗಳನ್ನ ಗಳಿಸಿದ್ದಾರೆ. ಈಕೆಯ ಇನ್ನಿಬ್ಬರು ಕಿರಿಯ ಸಹೋದರಿಯರು ಇದೇ ಶಾಲೆಯಲ್ಲಿ ವ್ಯಾಸಂಗ ಮಾಡ್ತಿದ್ದಾರೆ. ಮೆಲಾಘರ್​​ ಗ್ರಾಮದ ದಾನಾ ಮಾಂಜಿ 2016ರಲ್ಲಿ ಪತ್ನಿಯ ಶವವನ್ನ ಹೆಗಲ ಮೇಲೆ ಹೊತ್ತು 10 ಕಿಲೋಮೀಟರ್​ ದೂರ ಸಾಗುವ ಮೂಲಕ ಸುದ್ದಿಯಾಗಿದ್ದರು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...