ಬಿಹಾರ ಬೋರ್ಡ್ 10 ನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು ಹಿಟ್ಟಿನ ಗಿರಣಿ ನಡೆಸುವ ಬಡ ಕುಟುಂಬದ ವಿದ್ಯಾರ್ಥಿನಿ ದಾಖಲೆ ಅಂಕ ಗಳಿಸಿದ್ದಾಳೆ. ಪಶ್ಚಿಮ ಚಂಪಾರಣ್‌ನ ಹರ್ನಾತಂಡ್‌ನಲ್ಲಿರುವ ಎಸ್‌ಎಸ್ ಹೈಸ್ಕೂಲ್‌ನ ಪ್ರಿಯಾ ಜೈಸ್ವಾಲ್ 483/500 ಅಂಕಗಳನ್ನು ಗಳಿಸಿದ್ದಾರೆ.
ಪ್ರಿಯಾ ಆದಿವಾಸಿಗಳ ಪ್ರಾಬಲ್ಯವಿರುವ ಹರ್ನಾತಂಡ್‌ನ ಕಾಡಿನ ಮಧ್ಯದಲ್ಲಿರುವ ಹಳ್ಳಿಯಿಂದ ಬಂದವರು. ಆಕೆಯ ಸಾಧನೆಯ ಬಗ್ಗೆ ಕುಟುಂಬ ಮತ್ತು ಶಿಕ್ಷಕ ವೃಂದ ಹೆಮ್ಮೆಪಟ್ಟಿದೆ. ಎಲ್ಲರೂ BSEB 10 ನೇ ತರಗತಿ ಫಲಿತಾಂಶದಲ್ಲಿ ಪ್ರಿಯಾ ಮಾಡಿರುವ ಸಾಧನೆಯನ್ನು ಕೊಂಡಾಡಿದ್ದಾರೆ.
ಯಾವುದೇ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನ ಸಹಾಯವಿಲ್ಲದೆಯೇ ವಿದ್ಯಾರ್ಥಿನಿ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ.
ಪ್ರಿಯಾ ಜೈಸ್ವಾಲ್ ಪಶ್ಚಿಮ ಚಂಪಾರಣ್ ಜಿಲ್ಲೆಯ ವಾಲ್ಮೀಕಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಧುಮ್ವಾತಂಡ್ ಗ್ರಾಮದ ಹಿಟ್ಟಿನ ಗಿರಣಿ ಮಾಲೀಕ ಸಂತೋಷ್ ಜೈಸ್ವಾಲ್ ಅವರ ಪುತ್ರಿ.
ಪ್ರಿಯಾಗೆ ಮೂವರು ಸಹೋದರಿಯರು ಮತ್ತು ಇಬ್ಬರು ಸಹೋದರರು ಇದ್ದಾರೆ. ತಾನು ವೈದ್ಯೆಯಾಗಬೇಕು ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಲು ಬಯಸುತ್ತೇನೆಂದು ಪ್ರಿಯಾ ಹೇಳಿದ್ದಾಳೆ. ಬಿಹಾರ ಬೋರ್ಡ್ 10 ನೇತರಗತಿ ಪರೀಕ್ಷಾ ಫಲಿತಾಂಶದಲ್ಲಿ ಶೇಕಡಾ 81.04 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.